ನ.1 ರಂದು ವಿಷ್ಣುವರ್ಧನ್,ಸರೋಜಾದೇವಿಗೆ ಮರಣೋತ್ತರವಾಗಿ ಕರ್ನಾಟಕ‌ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಮತ್ತು ಅಭಿನಯ ಶಾರದೆ ಬಿ.ಸರೋಜಾದೇವಿ ಅವರಿಗೆ ನವೆಂಬರ್  1ರ ಕನ್ನಡ ರಾಜ್ಯೋತ್ಸವದಂದು ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಅಭಿಮಾನಿಗಳಿಂದ ಸಾಕಷ್ಟು ಹಕ್ಕೊತ್ತಾಯ,ಆಗ್ರಹ ಕೇಳಬಂದ ನಂತರ ವಿಷ್ಣುವರ್ಧನ್ ಅವರಿ್ಎ ಮರಣೋತ್ತರವಾಗಿ ಕರ್ನಾಟಕ‌ರತ್ನ ಪುರಸ್ಕಾರ ನೀಡುವ ನಿರ್ಧಾರಕ್ಕೆ  ರಾಜ್ಯ ಸರ್ಕಾರ ಬಂದಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ಪುರಸ್ಕಾರದ ವಿಷಯ ಚರ್ಚೆಗೆ ಬಂದಿತು. ಈ ವೇಳೆ ವಿಷ್ಣುಸ್ಮಾರಕದ ಗೊಂದಲದಿಂದ ನೊಂದಿರುವ ಅಭಿಮಾನಿಗಳನ್ನು ಮತ್ತಷ್ಟು ನೋಯಿಸಬಾರದು ಎನ್ನುವ ನಿರ್ಧಾರಕ್ಕೆ ಬಂದ ಸಚಿವ ಸಂಪುಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡುವ ನಿರ್ಧಾರಕ್ಕೆ ಬಂದಿತು. ಇವರ ಜತೆ ಅಭಿನಯ ಶಾರದೆ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಯಿತು.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದ್ದು ಅಂದೇ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ.

ಸಚಿವ ಸಂಪುಟದಿಂದ ಈ ನಿರ್ಧಾರ ಹೊರಬೀಳುವ ಕೆಲ ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದರು,ಇದೇ ವೇಳೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದ್ದರು. ಆದರೆ ಇದೀಗ ಆ ಇಬ್ಬರು ಮಹನೀಯರಿಗೂ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ನಿರ್ಧಾರ ಪ್ರಕಟಿಸಿದೆ. ಈ ಹಿನ್ನೆಲಯಲ್ಲಿ ನಟಿಯರು ಸಿಎಂ ಹಾಗು ಡಿಸಿಎಂಗೆ ಕೃತಜ್ಞತೆ ಸಲ್ಲಿಸಿದರು.

Related Articles

Comments (0)

Leave a Comment