ವಿಜಯಪುರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ;ಒಂದು ಕೋಟಿ ಮೌಲ್ಯದ ನಕಲಿ ಕೀಟನಾಶಕ ವಶ..!
- by Suddi Team
- September 13, 2025
- 128 Views
 
                                                          ವಿಜಯಪುರ:ನಕಲಿ ಕೀಟನಾಶಕ ಮಾರಾಟಗಾರರ ವಿರುದ್ಧ ಸಮರ ಸಾರಿರುವ ಕೃಷಿ ಇಲಾಖೆ ಅಧಿಕಾರಿಗಳು ವಿಜಯಪುರ ಜಿಲ್ಲೆಯಲ್ಲಿ ಮಿಂಚಿನ ದಾಳಿ ನಡೆಸಿ 1 ಕೋಟಿ ಮೌಲ್ಯದ ನಕಲಿ ಕೀಟನಾಶಕ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿ ಕೊಂಡಿದ್ದಾರೆ.
ರಾಜ್ಯದಲ್ಲಿ ನಕಲಿ ಕೀಟನಾಶಕ ಮಾರಾಟಗಾರರ ಮೇಲಿನ ಕೃಷಿ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದೆ. ವಿಜಯಪುರ ಜಿಲ್ಲೆಯಲ್ಲಿ ಕೃಷಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸಿ ಲೈಫ್ ಆಗ್ರೋ ಕೆಮಿಕಲ್ಸ್ ಅವರ ಬ್ರಾಂಡ್ ನಲ್ಲಿ ನಕಲು ಮಾಡಿ ಕೀಟನಾಶಕ ತಯಾರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಬಂಧಿಸಿದ್ದಾರೆ. ದಾಳಿ ವೇಳೆ 1 ಕೋಟಿ ಮೌಲ್ಯದ ನಕಲಿ ಕೀಟನಾಶಕ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ವಿಚಕ್ಷಣ ದಳದ ಅಪಾರ ಕೃಷಿ ನಿರ್ದೇಶಕ ದೇವರಾಜ್ ನೇತೃತ್ವದಲ್ಲಿ ಹಾಸನ ಜಿಲ್ಲೆಯಲ್ಲಿ ನಕಲಿ ಕೀಟನಾಶಕ ಮಾರಾಟಗಾರರ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ಕೀಟನಾಶಕ ವಶಪಡಿಸಿಕೊಂಡಿದ್ದಾರೆ.ದಾಳಿ ವೇಳೆ ಟಿ. ಸ್ಟೋನ್ಸ್ ಕಂಪನಿಯ,ಸುಮಾರು 45 ಲಕ್ಷ ಬೆಲೆಬಾಳುವ 6500 ಕೆಜಿ ಬಯೋ ಸ್ಟಿಮ್ಯೂಲಂಟ್ ನಕಲಿ ಕೀಟನಾಶಕವನ್ನು ವಶಪಡಿಸಿಕೊಂಡು ನಕಲಿ ಕೀಟನಾಶಕ ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)