ಡೆಹ್ರಾಡೂನ್ ನಲ್ಲಿ ಪ್ರಧಾನಿ ಮೋದಿಯಿಂದ ಯೋಗಪಾಠ
- by Suddi Team
- June 21, 2018
- 116 Views
ಡೆಹ್ರಾಡೂನ್: ಇಂದು ವಿಶ್ವ ಯೋಗ ದಿನ.ನಾಲ್ಕನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಆಚರಿಸಲಾಯಿತು.ಡೆಹ್ರಾಡೂನ್ ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ದಾಮೋದರ್ ದಾದ್ ಮೋದಿ ಪಾಲ್ಗೊಂಡು ಯೋಗದ ಮಹತ್ವ ಸಾರಿದರು.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ
ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು.50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಜನರ ಜೊತೆಗೂಡಿ ಯೋಗಾಸನ ಮಾಡಿದರು. ವಿವಿಧ ಪಟ್ಟುಗಳ ಪ್ರದರ್ಶನದ ಮೂಲಕ ಗಮನ ಸೆಳೆದರು.
ನಂತರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ,
ಯೋಗದ ಮಹತ್ವ ತಿಳಿಸಿದರು. ಜಗತ್ತನ್ನು ಒಂದುಗೂಡಿಸುವ ಅತ್ಯುತ್ತಮ ಸಾಧನವಾಗಿ ಯೋಗ ಮಹತ್ವ ಪಡೆದುಕೊಂಡಿದೆ.
ಯೋಗದಿಂದ ಮಾನವನ ದೇಹ,ಮೆದುಳು ಮತ್ತು ಆತ್ಮ ಒಟ್ಟಿಗೆ ಬಂಧಿಯಾಗಲಿದೆ,ಯೋಗಾಸನ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗಲಿದೆ ಹಾಗಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
Related Articles
Thank you for your comment. It is awaiting moderation.
Comments (0)