ಕಿಚ್ಚ ಸುದೀಪ್ ರಾಜಕೀಯ ಪ್ರವೇಶ ಮಾಡ್ತಾರಾ?

ಬೆಂಗಳೂರು: ನಾನು ಕಲಾವಿದ,ಕಲಾಕ್ಷೇತ್ರದಲ್ಲಿ ನನ್ನ ಸೇವೆ ಇರಲಿದೆ ಆದರೆ ರಾಜಕೀಯ ಪ್ರವೇಶ ಮಾಡುವ ಯಾವುದೇ ಆಲೋಚನೆ ಸಧ್ಯಕ್ಕೆ ನನ್ನ ಮುಂದಿಲ್ಲ ಎಂದು ನಟ,ನಿರ್ದೇಶಕ,ನಿರ್ಮಾಪಕ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕಲಾವಿದನಾಗಿ ನಾನು ಈ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದೇನೆ ಇದರ ಜತೆ ‘ಅಮ್ಮನ ಹೆಜ್ಜೆ ಹಸಿರು ಹೆಜ್ಜೆ’ ಎಂದು ಪರಿಸರ ಉಳಿಸುವ ಕೆಲಸಕ್ಕೆ ಮುಂದಾಗಿದ್ದೇನೆ ‘ಕಲಾವಿದನಾಗಿ ಸದ್ಯಕ್ಕೆ ಇಷ್ಟು ಮಾತ್ರ ನಾನು ಮಾಡಬಲ್ಲೆ. ರಾಜಕೀಯ ಪ್ರವೇಶ ಮಾಡಿದಾಗ ಬೇರೆ ಎಲ್ಲ ಮಾಡೋಣ’ ಎಂದು ಹೇಳಿದರು.

ರಾಜಕೀಯಕ್ಕೆ ಬರೋದು ಯಾವಾಗ ಎಂದು ಹೇಳಕು ಸಾಧ್ಯವಿಲ್ಲ, ಅದು ನನಗೂ ‘ಗೊತ್ತಿಲ್ಲ, ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವ ಯಾವುದೇ ಯೋಚನೆ ಇಲ್ಲ. ಆದರೆ ಆಗಾಗ ಆ ರೀತಿಯ ಯೋಚನೆ ಬರುವ ಹಾಗೆ ಮಾಡುತ್ತಿರುತ್ತಾರೆ ಕೆಲವರು’ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಕಲಾವಿದರ ಬಗ್ಗೆ ಬಳಸಿದ್ದ ನಟ್ಟು ಬೋಲ್ಟ್ ಪದ ಪ್ರಯೋಗಕ್ಕೆ ಹಾಸ್ಯ ಕಲಾವಿದ ಸಾಧುಕೋಕಿಲ ಕಾರಣ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರದ್ದು ಏನೂ ಇಲ್ಲ. ಎಲ್ಲರನ್ನೂ ಕರೆದರೆ ನಾನು ಹೇಗೆ ನಿಭಾಯಿಸಲಿ? ಯಾರಿಗೆ ಸೆಕ್ಯುರಿಟಿ ಕೊಡಲಿ ಅಂತ ಸಾಧು ಕೋಕಿಲ ಆಮೇಲೆ ಹೇಳಿದರು. ಈ ಮಾತನ್ನು ಮೊದಲೇ ಡಿಕೆ ಶಿವಕುಮಾರ್​ ಅವರಿಗೆ ಸಾಧು ಹೇಳಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ. ಯಾವಾಗಲೂ ತಮಾಷೆ ಮಾಡುವ ಸಾಧು ಹೇಳಿಕೆ ಡಿಸಿಎಂ ಬಾಯಿ ಮೂಲಕ ಸೀರಿಯಸ್ ಆಗಿದೆ’ ಎಂದರು.

Related Articles

Comments (0)

Leave a Comment