ಸೆಪ್ಟೆಂಬರ್ ಕ್ರಾಂತಿಗಾಗಿ ಕೃಷ್ಣಮಠಕ್ಕೆ ಬಂದಿಲ್ಲ; ಡಿಸಿಎಂ ಡಿಕೆ ಶಿವಕುಮಾರ್
- by Suddi Team
- August 30, 2025
- 105 Views
ಉಡುಪಿ: ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ,ಸೆಪ್ಟೆಂಬರ್ ಕ್ರಾಂತಿಯೆಲ್ಲಾ ಏನಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಚರ್ಚೆಯಾಗುತ್ತಿರುವಾಗ ಪ್ರಾರ್ಥನೆಗೆ ಇದು ಸೂಕ್ತ ಕಾಲ ಎಂದು ಬಂದಿಲ್ಲ, “ಸೆಪ್ಟೆಂಬರ್ ಕ್ರಾಂತಿ ಅದೆಲ್ಲಾ ಏನಿಲ್ಲ. ಪ್ರಾರ್ಥನೆ ನನ್ನ ಸಹಜ ಪದ್ಧತಿ. ಉಡುಪಿಯ ಕೃಷ್ಣಮಠದಿಂದ ಈ ಹಿಂದೆಯೂ ಆಹ್ವಾನ ಇತ್ತು. ನಮ್ಮ ಸರ್ಕಾರ ಬಂದ ಮೇಲೆಯೂ ಆಹ್ವಾನಿಸಿದ್ದರು. ಆದರೆ ಬರಲು ಸಾಧ್ಯವಾಗಿರಲಿಲ್ಲ. ಈಗ ಆಹ್ವಾನ ಒಪ್ಪಿಕೊಂಡು ಬಂದಿದ್ದೇನೆ”ಅಷ್ಟೆ ಎಂದು ತಿಳಿಸಿದರು.
ಕೃಷ್ಣನ ಆಶೀರ್ವಾದ ಪಡೆಯಲು ಬಂದಿದ್ದೀರಿ ಎಂದು ಕೇಳಿದಾಗ, “ಕೃಷ್ಣ, ಗಣಪತಿ ಹಾಗೂ ನಿಮ್ಮ (ಮಾಧ್ಯಮಗಳ) ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಮ್ಮದು ಸೇರಿದಂತೆ ಎಲ್ಲರ ಆಶೀರ್ವಾದ ಬೇಕು” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಧರ್ಮಸ್ಥಳದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮಾವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ,“ಬಿಜೆಪಿ ಮತ್ತು ಜೆಡಿಎಸ್ನವರು ಜನತೆಯ ಬದುಕಿನ ಬಗ್ಗೆ ನೋಡುವುದಿಲ್ಲ. ಅವರು ಧರ್ಮ ಮತ್ತು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ” ಎಂದು ಟೀಕಿಸಿದರು.
ನಾಡಹಬ್ಬ ಮೈಸೂರು ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿನ ಬೆಳವಣಿಗೆಗಳು,ರಾಜವಂಶಸ್ಥರ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಲು ಡಿಸಿಎಂ ನಿರಾಕರಿಸಿದರು.
Related Articles
Thank you for your comment. It is awaiting moderation.


Comments (0)