ಬೆಂಗಳೂರು: ಕತ್ತೆಗಳ ಮೆರವಣಿಗೆ,ತಮಟೆ ಚಳವಳಿ,ರಸ್ತೆ ತಡೆ ಎಂದು ಸದಾ ಒಂದಿಲ್ಲೊಂದು ಹೋರಾಟದಲ್ಲೇ ಮುಳುಗಿರುತ್ತಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಸ್ವಲ್ಪ ಡಿಫರೆಂಟ್ ಆಗಿ ಕಂಡು ಬಂದರು, ಯೋಗಾಸನ ಮಾಡಿ ಗಮನ ಸೆಳೆದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಯೋಗ ಪ್ರದರ್ಶನ ಮಾಡಿದರು. ಸೂರ್ಯ ನಮಸ್ಕಾರ,ಪದ್ಮಾಸನ ಸೇರಿದಂತೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಅರ್ಧ ಗಂಟೆ ಕಾಲ ಆಯಾಸವಿಲ್ಲದೇ ಯುವಕರು ನಾಚುವಂತೆ ಯೋಗ ಪಟುವಿನಂತೆ ಯೋಗಾಸನ ಮಾಡಿದರು.
ಪ್ರಧಾನು ನರೇಂದ್ರ ಮೋದಿ ಅವರ ಕನಸಿನ ಯೋಗ ದಿನಾಚರಣೆಗೆ ಮೆಚ್ಚುಗೆ ಸೂಚಿಸಿದ ವಾಟಾಳ್, ಮೋದಿ ಉತ್ತಮ ಕೆಲಸ ಮಾಡಿದ್ದಾರೆ.ಆದರೆ ಯೋಗ ಸರ್ಕಾರಿ ಕಾರ್ಯಕ್ರಮ ಆಗಬಾರದು,ಎಲ್ಲರೂ ಅವರವರ ಆರೋಗ್ಯದ ದೃಷ್ಠಿಯಿಂದ ಯೋಗಾಭ್ಯಾದ ಮಾಡಬೇಕು,ವಯೋಮಾನದ ಬೇಧವಿಲ್ಲದೇ ಎಲ್ಲರೂ ಯೋಗಾಸನ ಮಾಡುವುದನ್ನು ಕಲಿಯಿರಿ ಎಂದು ವಾಟಾಳ್ ಕರೆ ನೀಡಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)