ಡಿಸಿಎಂ ಬೈಕ್ ರೈಡ್ ಗೆ ಸಿಎಂ ಗ್ರೀನ್ ಸಿಗ್ನಲ್..!

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ 700 ಮೀ. ಉದ್ದದ ಲೂಪ್ ರಸ್ತೆ ಸಂಚಾರ ಮುಕ್ತಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೊದಲಿಗರಾಗಿ ಬೈಕ್ ಚಲಾಯಿಸಿಕೊಂಡು ಮೇಲ್ಸೇತುವೆ ಮೇಲೆ ಸಂಚರಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಬೈಕ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ಹೆಬ್ಬಾಳ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೇಪ್ ಕತ್ತರಿಸಿ ಸಂಚಾರ ಮುಕ್ತಗೊಳಿಸಿದರು ನಂತರ ಡಿಸಿಎಂ ಡಿಕೆ ಶಿವಕುಮಾರ್ ಬೈಕ್ ರೈಡ್ ಗೆ ಮುಂದಾಗುತ್ತಿದ್ದಂತೆ ಸ್ವತಃ ಸಿಎಂ ಹಸಿರು ಬಾವುಟ ತೋರಿ ವಾಹನ ಸಂಚಾರಕ್ಕೆ ಮೇಲ್ಸೇತುವೆಯನ್ನು ಮುಕ್ತಗೊಳಿಸಿದರು. ಡಿಕೆ ಶಿವಕುಮಾರ್ ನೂತನ ಮೇಲ್ಸೇತುವೆ ಮೇಲೆ ಅಧಿಕೃತವಾಗಿ ಮೊದಲ ಪ್ರಯಾಣ ಮಾಡಿ ಗಮನ ಸೆಳೆದರು.

ಬೈಕ್ ಪ್ರೇಮಿ ಡಿ.ಕೆ. ಶಿವಕುಮಾರ್ ಅವರು ಕಾಲೇಜು ದಿನಗಳಲ್ಲಿ ಅಂದರೆ ಪದವಿ ವ್ಯಾಸಂಗ ಮಾಡುವಾಗ 10,400 ರೂ. ಗೆ ಸಿಎಇ 7684 ಸಂಖ್ಯೆಯ ಯಡ್ಜಿ ಬೈಕ್ ಖರೀದಿಸಿದ್ದರು. ಕಾಲೇಜು ದಿನಗಳಲ್ಲಿ ಬಳಸಿದ್ದ ಈ ಬೈಕ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಬೆಂಗಳೂರಿನ ಹಳೆಯ ಬೈಕ್‌ ನವೀಕರಣ ಮಾಡುವ ಯುವಕ ಸುಪ್ರೀತ್ ಅವರು ರೀ ಕಂಡೀಷನಿಂಗ್ ಮಾಡಿದ್ದರು. ಈಗ ತಮ್ಮ ನೆಚ್ಚಿನ ಬೈಕ್ ಅನ್ನು ಹೆಬ್ಬಾಳ ಮೇಲ್ಸೇತುವೆ ಮೇಲೆ ಸೋಮವಾರ ಓಡಿಸಿದರು. ಅವರ ಅಭಿಮಾನಿಗಳು ಜೋರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದರು.

Related Articles

Comments (0)

Leave a Comment