ಪಿಎಂ ಅಲ್ಲ ಸಿಎಂ ರಾಜೀನಾಮೆ ನೀಡಬೇಕು; ಅಶೋಕ್
- by Suddi Team
 - August 10, 2025
 - 121 Views
 
                                                          ಬೆಂಗಳೂರು: ಮೋದಿ ರಾಜಿನಾಮೆಗೆ ಆಗ್ರಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಾಸ್ತವವಾಗಿ ರಾಜೀನಾಮೆ ನೀಡಬೇಕು, ಮತಗಳ್ಳತನ ಮಾಡಿ ಗೆದ್ದ ನಿಮಗೆ ಸಿಎಂ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಲು ಹಕ್ಕಿಲ್ಲ. ನಿಮಗೆ ಕಿಂಚಿತ್ತಾದರೂ ನೈತಿಕತೆ ಆತ್ಮಸಾಕ್ಷಿ ಇದ್ದರೆ, ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮತಗಳ್ಳತನದ ಪಿತಾಮಹ ಯಾರಪ್ಪ ಅಂದರೆ ಅದು ಲಾಟರಿ ಸಿಎಂ ಸಿದ್ದರಾಮಯ್ಯ!,”2018 ರ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು” ಎಂದು ಸಿದ್ದರಾಮಯ್ಯ ಅವರ ಆಪ್ತ, ಸಿ.ಎಂ.ಇಬ್ರಾಹಿಂ ಹೇಳಿರುವುದು ಮತಗಳ್ಳತನದ ಪಿತಾಮಹ ಯಾರು ಎಂಬುದನ್ನ ಸಾಬೀತುಪಡಿಸಿದೆ ಎಂದಿದ್ದಾರೆ.
“ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ವೋಟುಗಳ ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು”, ಎಂದೂ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, 2018ರಲ್ಲಿ ನಿಮ್ಮ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಕರ್ನಾಟಕದ ಜನತೆ ನಿಮ್ಮ ಸಂಪುಟದ 10 ಸಚಿವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದರು. ನೀವು ಕೂಡಾ ಭಯದಿಂದ ಎರಡು ಕಡೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಿರಿ. ಸಿ.ಎಂ. ಇಬ್ರಾಹಿಂ ಅವರು ಹೇಳಿದಂತೆ 2018ರಲ್ಲಿ ನೀವು ಮತಗಳ್ಳತನ ಮಾಡಿ ಗೆಲ್ಲದೇ ಹೋಗಿದ್ದರೆ, ನಂತರ 2019 ರಲ್ಲಿ ವಿಪಕ್ಷ ನಾಯಕರೂ ಆಗುತ್ತಿರಲಿಲ್ಲ, ಈಗ ಮತ್ತೊಮ್ಮೆ ಮುಖ್ಯಮಂತ್ರಿಗಳೂ ಆಗುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)