ಮೊಬೈಲ್ ಕಳೆದುಹೋದಲ್ಲಿ ಮರಳಿ ಪಡೆಯಲು ಹೀಗೆ ಮಾಡಿ ಅಂತಿದ್ದಾರೆ ಪೊಲೀಸರು..!
- by Suddi Team
- July 30, 2025
- 68 Views

ಶಿವಮೊಗ್ಗ: ಸಿಇಐಆರ್ ಪೋರ್ಟಲ್ ಬಳಸಿ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲು ಸಾಧ್ಯವಿದ್ದು, ಫೋನ್ ಕಳೆದುಕೊಂಡ ಎಲ್ಲಾ ಸಾರ್ವಜನಿಕರು CEIR ಪೋರ್ಟಲ್ ನಲ್ಲಿ ದೂರು ದಾಖಲಿಸಿ ಕಳೆದುಹೋದ ಮೊಬೈಲ್ ಅನ್ನು ಪುನಃ ಪಡೆದುಕೊಳ್ಳುವ ಉಪಯೋಗವನ್ನು ಪಡೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಿಇಎನ್ ಕ್ರೈಂ ಪೊಲೀಸ್ ರಿಂದ CEIR ಪೋರ್ಟಲ್ ಬಳಸಿ, ಕಳೆದು ಹೋದ 110 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲಾಗಿದ್ದು, ಸದರಿ ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ತಮ್ಮ ಕಳೆದು ಹೋದ ಮೊಬೈಲ್ ಮಾಹಿತಿಯನ್ನು ಈ CEIR (Central Equipment Identity Register) ನೋಂದಾಯಿಸಬಹುದಾಗಿದೆ. ಪ್ರತಿ ಜಿಲ್ಲೆಯ ಸಿಇಎನ್ ಕೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧಿಕ್ಷಕರವರು ಇದರ ನೋಡಲ್ ಅಧಿಕಾರಿಗಳಾಗಿರುತ್ತಾರೆ ಎಂದು ಪೊಲೀಸರು ಕಳೆದುಹೋದ ಮೊಬೈಲ್ ಗಳ ಬಗ್ಗೆ ನಿರ್ಲಕ್ಷ್ಯ ತಾಳದೆ ದೂರು ದಾಖಲಿಸಲು ಸಲಹೆ ನೀಡಿದ್ದಾರೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಮತ್ತು ಎಎಸ್ಪಿಗಲಲಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ಕೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು CEIR (Central Equipment Identity Register) ಪೋರ್ಟಲ್ ಸಹಾಯದಿಂದ ಕಳೆದ ಮೂರು ತಿಂಗಳಲ್ಲಿ ಅಂದಾಜು ಮೌಲ್ಯ 16,35,000/- ರೂ ಗಳ ಒಟ್ಟು 110 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದು, ಜುಲೈ 29 ರಂದು ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಎಸ್ಪಿ ಮಿಥುನ್ ಕುಮಾರ್ ಜಿ ಕೆ ರವರು ಪತ್ತೆ ಮಾಡಲಾದ ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ಮಾಲೀಕರುಗಳಿಗೆ ಹಿಂದಿರುಗಿಸಿದರು.
ಶಿವಮೊಗ್ಗ, ಜಿಲ್ಲೆಯಲ್ಲಿ ಇವರೆಗೆ CEIR (Central Equipment Identity Register) ಪೊರ್ಟಲ್ ಸಹಾಯದಿಂದ ಒಟ್ಟು 1000 ಕ್ಕೂ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಈ ತಂಡಗಳ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದರು.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳೆದು ಹೋದಲ್ಲಿ ಠಾಣೆಗೆ ಭೇಟಿ ನೀಡದೇ ಸ್ವತಃ ತಾವೇ KSP ಅಪಿಕೇಷನ್ ನ e-LOST APP ಮೂಲಕ ದೂರು ದಾಖಲಿಸಿ, ಸ್ವೀಕೃತಿಯನ್ನು ಪಡೆದು, https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ Block Stolen / Lost Mobile ಆಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಸದರಿ ಫಾರಂ ನಲ್ಲಿ.. ಕಳೆದು ಹೋದ ಮೊಬೈಲ್ ಫೋನ್ IMEI ನಂಬರ್, ಮೊಬೈಲ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮುಖಾಂತರ ದೂರನ್ನು ದಾಖಲೆಬಹುದು, ದೂರು ದಾಖಲಾದ 24 ಗಂಟೆಯ ಒಳಗಾಗಿ ಕಳೆದು ಹೋದ ಮೊಬೈಲ್ ಫೋನ್ ಬಾಕ್ ಆಗುತ್ತದೆ. ಇದರಿಂದಾಗಿ ನಿಮ್ಮ ಮೊಬೈಲ್ ಪೋನ್ ದುರ್ಬಳಕೆಯಾಗದಂತೆ ತಡೆಯ ಬಹುದಾಗಿರುತ್ತದೆ. ನಿಮ್ಮ ಮೊಬೈಲ್ ಫೋನ್ ಅನ್ನು ಯಾರಾದರೂ ಬಳಕೆ ಮಾಡಲು ಪ್ರಯತ್ನಿಸಿದ್ದಲ್ಲಿ, ಅವರ ವಿವರವು ದೊರಕುತ್ತದೆ. ಇದರಿಂದ ಸುಲಭವಾಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲು ಸಾಧ್ಯವಿರುತ್ತದೆ. ಆದ್ದರಿಂದ ಎಲ್ಲಾ ಸಾರ್ವಜನಿಕರು CEIR ಪೋರ್ಟಲ್ ನ ಉಪಯೋಗವನ್ನು ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
Related Articles
Thank you for your comment. It is awaiting moderation.
Comments (0)