ಕೆಎಸ್ಆರ್ಟಿಸಿಯಿಂದ ಒನ್ ಡೇ ಪ್ಯಾಕೇಜ್ ಟೂರ್; ಎಲ್ಲೆಲ್ಲಿಗೆ ಗೊತ್ತಾ?
- by Suddi Team
- July 25, 2025
- 51 Views

ಬೆಂಗಳೂರು: ವೀಕೆಂಡ್ನಲ್ಲಿ ಬೆಂಗಳೂರು ಹೊರಭಾಗದಲ್ಲಿ ಒನ್ ಡೇ ಟ್ರಿಪ್ ಹೋಗಬೇಕು ಎನ್ನುವವರಿಗೆ ಕೆಎಸ್ಆರ್ಟಿಸಿ ಒಳ್ಳೆಯ ಪ್ಯಾಕೇಜ್ ಟೂರ್ ಪರಿಚಯಿಸಿದೆ. ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ನಿಗಮದ ಬಹುಬೇಡಿಕೆಯ ಅಶ್ವಮೇಧ ಬಸ್ದುಗಳನ್ನು ಸಜ್ಜುಗೊಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು “ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಮಾರ್ಗದಲ್ಲಿ ಪ್ಯಾಕೇಜ್ ಟೂರ್ ಆರಂಭಿಸಿದೆ. ಜುಲೈ 26ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದೆ. ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗ ಈ ಟೂರ್ ನಿರ್ವಹಣೆ ಮಾಡಲಿದೆ.
ಅಶ್ವಮೇಧ ಕ್ಲಾಸಿಕ್ ಬಸ್ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ಯಾಕೇಜ್ ಟೂರ್ ಇರಲಿದೆ. ಇದರಲ್ಲಿ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟ ಸೇರಿರುವುದಿಲ್ಲ, ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ದರ ಪಡೆಯಲಾಗಿರುತ್ತದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಬೆಳಗ್ಗೆ 6.30ಕ್ಕೆ ಬಸ್ ಹೊರಡಲಿದ್ದು, 9.30ರವರೆಗೆ ಬೆಂಗಳೂರಿನಿಂದ – ಶಿವಗಂಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನ ವೀಕ್ಷಣೆ ಮತ್ತು ಶ್ರೀ ಹೊನ್ನಮ್ಮ ದೇವಿ ದೇವಸ್ಥಾನ ವೀಕ್ಷಣೆ ಮಾಡಿಸಲಾಗುತ್ತದೆ. ನಂತರ 11.15ರವರೆಗೆ ಶಿವಗಂಗೆ – ಸಿದ್ದಗಂಗಾ ಮಠ ಶ್ರೀ ಸಿದ್ದಗಂಗಾಕ್ಷೇತ್ರ ವೀಕ್ಷಣೆ ಮಾಡಿಸಲಾಗುತ್ತದೆ. ಅಲ್ಲಿಂದ 12.45ರವರೆಗೆ ಸಿದ್ದಗಂಗಾ ಮಠ – ದೇವರಾಯನ ದುರ್ಗ ಶ್ರೀ ಭೋಗ ನರಸಿಂಹ ದೇವಸ್ಥಾನ ವೀಕ್ಷಣೆ ಇರಲಿದೆ.
12.45ರಿಂದ 2.30ರವರೆಗೆ ದೇವರಾಯನ ದುರ್ಗ- ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ವೀಕ್ಷಣೆ ಮಾಡಿಸಲಿದ್ದು, ಸಂಜೆ 4.30ರವರೆಗೆ ಗೊರವನಹಳ್ಳಿ ವಿಧುರಾಶ್ವತ್ಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ ವೀಕ್ಷಣೆ ಇರಲಿದೆ. ವಿಧುರಾಶ್ವತ್ಥದಿಂದ ಘಾಟಿ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನರಸಿಂಹ ದೇವಸ್ಥಾನ ವೀಕ್ಷಣೆ ಸಂಜೆ 5.30ರವರೆಗೆ ಇರಲಿದೆ. ಘಾಟಿ ಸುಬ್ರಹ್ಮಣ್ಯದಿಂದ ಹೊರಟು ರಾತ್ರಿ 8ಕ್ಕೆ ಬೆಂಗಳೂರು ತಲುಪಲಾಗುತ್ತದೆ.
ಪ್ಯಾಕೇಜ್ ಟೂರ್ ಸಾರಿಗೆಗಳ ಪ್ರಯಾಣ ದರದ ವಿವರಗಳು:
ಅಶ್ವಮೇಧ ಕ್ಲಾಸಿಕ್ ಸಾರಿಗೆ ಪ್ರಯಾಣ ದರ (ರೂ.ಗಳಲ್ಲಿ)
ವಯಸ್ಕರು ₹650
ಮಕ್ಕಳಿಗೆ (6 ರಿಂದ 12 ವರ್ಷ) 500-00
ಪ್ರಯಾಣಿಕರು ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ www.ksrtc.in & www.ksrtc.karnataka.gov.in ವೆಬ್ ಸೈಟ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ ಎಂದು ಕೆಎಸ್ಆರ್ಸಿ ತಿಳಿಸಿದೆ.
Related Articles
Thank you for your comment. It is awaiting moderation.
Comments (0)