ಭೂಸ್ವಾಧೀನಕ್ಕೆ ಷರತ್ತುಬದ್ದ ಒಪ್ಪಿಗೆ ನೀಡಿದ ರೈತ ಹೋರಾಟ ಸಮಿತಿ

ಬೆಂಗಳೂರು: ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಚನ್ನರಾಯಪಟ್ಟಣ ಹೋಬಳಿಯ ರೈತ ಹೋರಾಟ ಸಮಿತಿಯ ಕೆಐಎಡಿಬಿಗೆ 13 ಗ್ರಾಮಗಳ ಒಟ್ಟು ವಿಸ್ತಿರ್ಣ 1,777 ಎಕರೆ ಜಮೀನನ್ನು ಷರತ್ತುಬದ್ದವಾಗಿ ನೀಡುವ ಸಮ್ಮತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯ ರೈತ ಹೋರಾಟ ಸಮಿತಿಯ ನಿಯೋಗ ಇಂದು ಸಿಎಂ ಅಧಿಕೃತ ನಿವಾಸ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು. ನಾಲ್ಕು ಷರತ್ತುಗಳನ್ನು ಹಾಕಿ ತಮ್ಮ ಜಮೀನು ಖರೀದಿಗೆ ಒಪ್ಪಿಗೆ ಇರುವುದಾಗಿ ನಿಯೋಗ ತನ್ನ ಮನವಿಯಲ್ಲಿ ತಿಳಿಸಿದೆ.

ಚನ್ನರಾಯಪಟ್ಟಣ ಹೋಬಳಿ 1,777 ಎಕರೆ ಜಮೀನನ್ನು ಕೊಡುವುದಕ್ಕೆ 13 ಗ್ರಾಮಗಳ ರೈತರ ಒಪ್ಪಿಗೆಯಿದ್ದು, ಸರ್ಕಾರ ಒಳ್ಳೆಯ ಬೆಲೆ ನಿಗಧಿಪಡಿಸಿ ಜಮೀನು ಖರೀದಿ ಮಾಡಲು ವಿನಂತಿಸಿದೆ.

ಷರತ್ತುಗಳು:

1. ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗಧಿಪಡಿಸುವುದು.

2. ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸ ಅನುಗುಣವಾಗಿ ಉದ್ಯೋಗ ನೀಡುವುದು.

3. ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು.

4. ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು.

Related Articles

Comments (0)

Leave a Comment