ಬೆಂಗಳೂರು–ಹುಬ್ಬಳ್ಳಿ ರೈಲು ಸಿಂಧನೂರವರೆಗೆ ವಿಸ್ತರಣೆ: ಸೋಮಣ್ಣ ಹಸಿರು ನಿಶಾನೆ

ಸಿಂಧನೂರು: KSR ಬೆಂಗಳೂರು–SSS ಹುಬ್ಬಳ್ಳಿ ಮದ್ಯೆ ಸಂಚರಿಸುವ ರೈಲು (ಸಂಖ್ಯೆ 17391/92) ಸಿಂಧನೂರವರೆಗೆ  ವಿಸ್ತರಿಸಲಾಗಿದ್ದು ಈ ರೈಲಿಗೆ ಇಂದು ಸಿಂಧನೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ರೈಲ್ವೆ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ  ಅವರು ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿ. ಸೋಮಣ್ಣ, ಸಿಂಧನೂರು ರೈಲ್ವೆ ನಿಲ್ದಾಣದಲ್ಲಿ ಶೀಘ್ರವೇ ರಿಸರ್ವೇಶನ್ ಕೌಂಟರ್ ಆರಂಭಿಸಲಾಗುತ್ತದೆ. ಪ್ರಯಾಣಿಕರ ವಿಶ್ರಾಂತಿ ಗೃಹ ನಿರ್ಮಿಸಿ, ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸುವ ಮೂಲಕ ಒಂದು ಮಾದರಿ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುತ್ತದೆ ಎಂದು ಹೇಳಿದರು.

ಈ ರೈಲಿನ ವಿಸ್ತರಣೆಯಿಂದ ಈ ಭಾಗದಲ್ಲಿ ವಾಣಿಜ್ಯ, ಕೈಗಾರಿಕೆ, ಕೃಷಿ ಮತ್ತು ಶೈಕ್ಷಣಿಕ ಕ್ಷೇತ್ರಗಳ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ ಆಗಲಿದೆ. ಪ್ರತಿದಿನ ಸಂಚರಿಸುವ ಈ ರೈಲು ಸೇವೆಯಿಂದ ಸಿಂಧನೂರು ಹಾಗೂ ಹತ್ತಿರದ ಗ್ರಾಮಗಳ ಜನತೆ ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳಿಗೆ ಸುಲಭವಾಗಿ ಸಂಚರಿಸಲು ಸಹಕಾರಿಯಾಗಲಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಇಲಾಖೆ ತ್ವರಿತ ಕಾರ್ಯಗತಿಯಿಂದ  ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣದಲ್ಲಿ ತೊಡಗಿದೆ. ಇದಕ್ಕೆ ರಾಜ್ಯಗಳ ಸಹಕಾರ ಅಗತ್ಯವಾಗಿದೆ. ಈ ಹಿಂದಿನ ಎಲ್ಲ ಯೋಜನೆಗಳು ಶರವೇಗದಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

Related Articles

Comments (0)

Leave a Comment