ಮೂಟೆಯಲ್ಲಿ ಮಹಿಳೆಯ ಡೆಡ್ ಬಾಡಿ; ಆರೋಪಿ ಅರೆಸ್ಟ್

ಬೆಂಗಳೂರು: ಮಹಿಳೆಯನ್ನು ಕೊಲೆ ಮಾಡಿ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಎಸ್ಕೇಪ್‌ ಆಗಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರ್ಯಾಚರಣೆಗಿಳಿದ ಇನ್‌ಸ್ಪೆ‌‌ಕ್ಟರ್‌ ಗಿರೀಶ್ ನಾಯ್ಕ್ ನೇತೃತ್ವದ ತಂಡ 20 ಗಂಟೆ ಒಳಗಾಗಿಯೇ ಹಂತಕನನ್ನು ಬಂಧಿಸಿದೆ.

ಬಂಧಿತ ಅಸ್ಸಾಂ ಮೂಲದ ಶಂಶುದ್ದೀನ್ ಎನ್ನಲಾಗಿದೆ. ಕೊಲೆಯಾದ ಮಹಿಳೆ ಪುಷ್ಪಾ @ ಆಶಾ ಮತ್ತು ಶಂಶುದ್ದೀನ್ ಲಿವ್‌‌‌-ಇನ್‌ ರಿಲೇಷನ್‌ನಲ್ಲಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಪರಿಸ್ಥಿತಿ ಕೊಲೆ ಹಂತಕ್ಕೆ ಹೋಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣವೇನು?

ಮೊನ್ನೆ ತಡರಾತ್ರಿ ಕಸ ಹಾಕಲು ಬಂದ ಸಾರ್ವಜನಿಕನಿಂದ ಕೊಲೆ ಪ್ರಕರಣದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಡರಾತ್ರಿ 1.40ಕ್ಕೆ ಕಸ ಹಾಕಲು ಬಂದ ವ್ಯಕ್ತಿಯೊಬ್ಬ ಅನುಮಾನಾಸ್ಪದ ಚೀಲ ಕಂಡು ಚೀಲ ಬಿಚ್ಚಿದಾಗ ಯುವತಿ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ ಯುವತಿ ಕೊಲೆ ವಿಚಾರ ಬಯಲಿಗೆ ಬಂದಿತ್ತು.

Related Articles

Comments (0)

Leave a Comment