ಬೆಳಗಾವಿ ರೈಲು ನಿಲ್ದಾಣದಲ್ಲಿ ನವೀಕೃತ ವಿಶ್ರಾಂತಿ ಕೋಣೆ ಸೇವೆಗೆ ಲಭ್ಯ
- by Suddi Team
- June 27, 2025
- 41 Views

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯಾಪ್ತಿಯ ಬೆಳಗಾವಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಅನೇಕ ಉಪಯುಕ್ತ ಸೇವೆಗಳನ್ನು ಪರಿಚಯಿಸಿದೆ. ಈಗ ನಿಲ್ದಾಣದಲ್ಲಿ ಸುಸಜ್ಜಿತ ಡಿಲಕ್ಸ್ ಕೊಠಡಿಗಳು ಹಾಗೂ ಡಾರ್ಮಿಟರಿಯನ್ನು ಒಳಗೊಂಡ ವಿಶ್ರಾಂತಿ ಕೋಣೆಗಳು (Retiring Room) ನವೀಕರಣಗೊಂಡಿದ್ದು, ಪ್ರಯಾಣಿಕರ ಬಳಕೆಗೆ ಮುಕ್ತವಾಗಿವೆ. ಹವಾನಿಯಂತ್ರಿತ ಐದು ಡಿಲಕ್ಸ್ ಕೊಠಡಿಗಳು ವಿಸ್ತಾರವಾದ, ಆಧುನಿಕ ವಿನ್ಯಾಸದಿಂದ ನಿರ್ಮಿಸಲಾಗಿದ್ದು, ಪ್ರತ್ಯೇಕ ಚಹಾ ಅಥವಾ ಕಾಫಿ ಸೇವೆನೆಗೆ ವ್ಯವಸ್ಥೆ ಮಾಡಲಾಗಿದೆ. 22 ಹಾಸಿಗೆಯುಳ್ಳ ಡಾರ್ಮಿಟರಿಗಳು ಶುಚಿತ್ವವಾಗಿದ್ದು, ನಿತ್ಯ ವಾಶ ಮಾಡಲಾಗುತ್ತದೆ. ಕೊಠಡಿಗಳಲ್ಲಿ ಬಟ್ಟೆ ಬದಲಿಸುವ ಕೋಣೆ, ಪ್ರತೇಕ್ಯ ಲಗೇಜ ಕೊಠಡಿ, ಉತ್ತಮ ಸಾಮೂಹಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಿವೆ. ಈ ಸೇವೆಗಳನ್ನು 3 ಗಂಟೆ, 6 ಗಂಟೆ, 9 ಗಂಟೆ, 12 ಗಂಟೆ, 24 ಗಂಟೆ ಮತ್ತು 48 ಗಂಟೆಗಳ ಕಾಲಾವಧಿಯಂತೆ ಕೊಠಡಿಗಳನ್ನು ಬುಕ್ ಮಾಡಬಹುದು.
ವಿಶ್ರಾಂತಿ ಕೋಣೆ (Retiring ) ಶುಲ್ಕ:
ಡಿಲಕ್ಸ್ ಕೊಠಡಿಗೆ :
3 ಗಂಟೆ – ರೂ 500/-,
6 ಗಂಟೆ – ರೂ 800/-,
9 ಗಂಟೆ – ರೂ 1000/-,
12 ಗಂಟೆ – ರೂ 1200/-,
24 ಗಂಟೆ – ರೂ 2000/-,
48 ಗಂಟೆ – ರೂ 3800/-,
ಡಾರ್ಮಿಟರಿ ಶುಲ್ಕ:
3 ಗಂಟೆ – ರೂ 300/-,
6 ಗಂಟೆ – ರೂ 400/-,
9 ಗಂಟೆ – ರೂ 500/-,
12 ಗಂಟೆ – ರೂ 600/-,
24 ಗಂಟೆ – ರೂ 800/-,
48 ಗಂಟೆ – ರೂ 1400/- ಸಂದಾಯ ಮಾಡಬೇಕು. ಡಿಲಕ್ಸ್ ಕೊಠಡಿಗಳು ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಹೊಂದಿವೆ. ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ. ಐಆರ್ಸಿಟಿಸಿ (IRCTC) ವತಿಯಿಂದ ಲೈಸೆನ್ಸಿ ಪಡೆದ M/S Namah Enterprises ಈ ಸೇವೆಗಳನ್ನು ನಿರ್ವಹಿಸುತ್ತದೆ. ಆನ್ಲೈನ್ ಬುಕ್ಕಿಂಗ್ ಸೇವೆಯು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಹೆಚ್ಚಿನ ಮಾಹಿತಿಗೆ ಮತ್ತು ಬುಕ್ಕಿಂಗ್ಗಾಗಿ ಪ್ರಯಾಣಿಕರು ಐಆರ್ಸಿಟಿಸಿ ಪೋರ್ಟಲ್ ಅಥವಾ App ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ಮೂಲಕ ತಿಳಿಸಿದೆ.
Related Articles
Thank you for your comment. It is awaiting moderation.
Comments (0)