ನಾನು ಹಾರ್ಟ್ ಆದ್ರೆ ಹಂಸಲೇಖ ಹಾರ್ಟ್ ಬೀಟ್ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್
- by Suddi Team
- June 23, 2025
- 132 Views

ಬೆಂಗಳೂರು: ಕನ್ನಡದ ಕನಸುಗಾರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ನಾನು ಹಾರ್ಟ್ ಆದ್ರೆ ಹಂಸಲೇಖ ಹಾರ್ಟ್ ಬೀಟ್ ಎಂದು ಬಣ್ಣಿಸುತ್ತಾ ಲವ್ ಯೂ, ಮಿಸ್ ಯೂ ಎಂದಿದ್ದಾರೆ.
ಹಂಸಲೇಖ ಅವರಿಗೆ 73ರ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ರವಿ-ಹಂಸ ಜೋಡಿ ಎಂದೇ ಪ್ರಸಿದ್ಧವಾಗಿ ಈಗ ದೂರದೂರವಿದ್ದೇ ಪರಸ್ಪರ ಅಭಿಮಾನ ತೋರುತ್ತಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್ ಹುಟ್ಟುಹಬ್ಬಕ್ಕೆ ರವಿಮಾಮನ ಸಿನಿ ಜರ್ನಿಯ ಅನಾವರಣದಂತಹ ಸಾಲುಗಳ ಮೂಲಕ ವಿನೂತನವಾಗಿ ಹುಟ್ಡುಹಬ್ಬದ ಶುಭ ಕೋರಿದ್ದ ಹಂಸಲೇಖ ಅವರಿಗೆ ಅಷ್ಟೇ ಆತ್ಮೀಯತೆ ಮತ್ತೆ ಅಭಿಮಾನದಿಂದ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ರವಿಚಂದ್ರನ್.
ಅಷ್ಟೇ ಅಲ್ಲದೆ ಹಂಸಲೇಖ ಅವರೊಂದಿಗಿನ ಸಿನಿ ಜರ್ನಿಯ ಕ್ಷಣಗಳನ್ನು ಮೆಲುಕು ಹಾಕುತ್ತಲೇ, ಎಲ್ಲರಿಗೂ ಅವರು ಹಂಸಲೇಖ. ಆದ್ರೆ ನನಗೆ ರಾಜು. ಬೆಳ್ಳಿ ಪರದೆಯ ಮೇಲೆ ನಾನು ರೊಮ್ಯಾಂಟಿಕ್ ಹೀರೋ ಆಗಿ ರಾರಾಜಿಸಿದ್ದರೆ ಅದಕ್ಕೆ ಅವರೇ ಕಾರಣ. ನಮ್ಮ ಜೋಡಿಯಲ್ಲಿ ಏನೋ ಪವರ್ ಇದೆ ಹಾಗಾಗಿಯೇ ಎಲ್ಲರ ಮನಸ್ಸಿನಲ್ಲಿ ಇಂದೂ ನಮ್ಮ ಹಾಡುಗಳಿವೆ ಎಂದರು.
ನಮ್ಮ ರಿಲೇಷನ್‌ಶಿಪ್‌ಗೆ ಬೆಲೆ ಕಟ್ಟಲಾಗಲ್ಲ. ಐ ಮಿಸ್ ಹಿಮ್, ಐ ಲವ್ ಹಿಮ್, ಹ್ಯಾಪಿ ಬರ್ತ್ ಡೇ ರಾಜು, ನಾನು ಹಾರ್ಟ್ ಆದರೆ ಅವರು ಹಾರ್ಟ್ ಬೀಟ್ ಎನ್ನುತ್ತಾ ಮತ್ತೊಮ್ಮೆ ಹುಟ್ಟುಹಬ್ಬದ ಶುಭ ಕೋರಿದರು.
ಇನ್ನು ಹಂಸಲೇಖ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಹಂಸಲೇಖ ಕೇಕ್ ಕತ್ತರಿಸುವಾಗ ಹಾಜರಾದ ರವಿಚಂದ್ರನ್ ಅಲ್ಲಿಯೂ ಮತ್ತೊಮ್ಮೆ ವಿಷ್ ಮಾಡಿ ಕೇಕ್ ತಿನ್ನಿಸಿ ಶುಭ ಕೋರಿದರು. ಕನ್ನಡದ ಚಿತ್ರರಂಗದ ಎವರ್ ಗ್ರೀನ್ ಮ್ಯೂಸಿಕಲ್ ಜೋಡಿಯನ್ನು ಒಟ್ಟಿಗೆ ನೋಡಿದ ಸಿನಿರಂಗದ ಗಣ್ಯರು ಕ್ಷಣ ಕಾಲ ರವಿಚಂದ್ರನ್ ಹಂಸಲೇಖ ಯಶಸ್ಸಿನ ಕಾಲಘಟ್ಟಕ್ಕೆ ಹೊರಳಿದರು.
Related Articles
Thank you for your comment. It is awaiting moderation.
Comments (0)