ಒಂದು ಗಂಟೆಯಲ್ಲಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಇಎ
- by Suddi Team
- June 18, 2025
- 109 Views
ಬೆಂಗಳೂರು: ಡಿಸಿಇಟಿ-25 ಪರೀಕ್ಷೆ ಬರೆದಿದ್ದ ಹೊರನಾಡು, ಗಡಿನಾಡು ಕನ್ನಡಿಗರ ಸಲುವಾಗಿ ಬುಧವಾರ (ಜೂನ್ 18) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಯಲ್ಲಿ ಪರೀಕ್ಷೆ ನಡೆದು ಒಂದು ಗಂಟೆಯಲ್ಲೇ ಫಲಿತಾಂಶವನ್ನೂ ಪ್ರಕಟಿಸಲಾಗಿದೆ.
ಪರೀಕ್ಷೆ ತೆಗೆದುಕೊಂಡಿದ್ದ 27 ಅಭ್ಯರ್ಥಿಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಕೇವಲ ಏಳು ಮಂದಿ. ಅವರಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದು, ಉಳಿದ ಆರು ಮಂದಿ ಅರ್ಹರಾಗಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 50 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 12 ಅಂಕ ಪಡೆದವರು ಮಾತ್ರ ಈ ಕೋಟಾದಡಿ ಸೀಟು ಪಡೆಯಲು ಅರ್ಹರಾಗುತ್ತಾರೆ. ಆದರೆ, ಏಳು ಮಂದಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ 10 ಅಂಕ ಪಡೆದು ಅನರ್ಹರಾಗಿದ್ದಾರೆ ಎಂದರು.
ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ಗಳ ರ್ಯಾಂಕ್ ಪ್ರಕಟ:
ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರ್ಯಾಂಕ್ ಪ್ರಕಟಿಸಿದೆ. ಯುಜಿಸಿಇಟಿ ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ ರ್ಯಾಂಕ್ ನೀಡಲಾಗಿದೆ. ಬಿಪಿಟಿ ಮತ್ತು ಎಎಚ್ಎಸ್ ಕೋರ್ಸ್ಗಳಿಗೆ ವಿಜ್ಞಾನ ಮತ್ತು ಬಿಪಿಒ ಕೋರ್ಸ್ ಗಳ ಪ್ರವೇಶಕ್ಕೆ ಕಲಾ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಶಿಕ್ಷಣ ಮುಗಿಸಿರುವವರು ಕೂಡ ಅರ್ಹರು ಎಂದು ಎಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)