ಕೆಲಸದ ಒತ್ತಡ ಹೆಚ್ಚಿದೆಯೇ? ರಿಲ್ಯಾಕ್ಸ್ ಆಗಲು ಉತ್ತಮ ಟಿಪ್ಸ್ ಇಲ್ಲಿವೆ!
- by Suddi Team
- June 18, 2018
- 125 Views
ದೀರ್ಘಕಾಲದ ನಂತರ ಕೆಲಸ ಮುಗಿಸಿ ಮನೆಗೆ ಬರುತ್ತೇವೆ. ಮನೆಗೆ ಬಂದ ತಕ್ಷಣ ಮನೆಗೆಲಸದಲ್ಲಿ ಮುಳುಗುತ್ತೇವೆ ಮತ್ತಷ್ಟು ಧಣಿಯುತ್ತೇವೆ. ಮನೆ ಕೆಲಸವೆಲ್ಲಾ ಮುಗಿದ ತಕ್ಷಣ ಟಿವಿ ನೋಡಲು ಆರಂಭಿಸುತ್ತೇವೆ ಏನೇ ಮಾಡಿದರೂ ತಮ್ಮ ಒತ್ತಡ, ಧಣಿವು ಮಾತ್ರ ಕಡಿಮೆಯಾಗುವುದಿಲ್ಲ.
ಹೀಗೆ ಕೆಲವು ದಿನ ಕಳೆದರೆ ಸುಸ್ತು, ತಲೆ ನೋವು, ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಬೇರೆಯವರು ಮಾತನಾಡಿದರೆ ಕೋಪ ಬರುತ್ತದೆ. ಯಾವುದೋ ಒತ್ತಡವನ್ನು ಯಾರ ಮೇಲೋ ಹಾಕುತ್ತೇವೆ. ಇಂತಹ ಒತ್ತಡವನ್ನು ಆರಂಭದಲ್ಲೇ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಬೇಕು. ಕೆಲಸ ಮುಗಿಸಿ ಮನೆಗೆ ಬಂದ ನಂತರ ಆದಷ್ಟು ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನೆ ಮಾಡ ಬೇಕು.
ಕೆಲಸದ ಒತ್ತಡದಿಂದ ಹೊರ ಬರಲು ಕೆಲವು ಉತ್ತಮ ಟಿಪ್ಸ್ ಇಲ್ಲಿವೆ……
*ಪುಸ್ತಕಗಳು ಪ್ರತಿಯೊಬ್ಬರಿಗೂ ಉತ್ತಮವಾದ ಸಂಗಾತಿ. ಪುಸ್ತಕಗಳನ್ನು ಓದು ಹವ್ಯಾಸ ರೂಢಿಸಿ ಕೊಳ್ಳುವುದರಿಂದ ಜ್ಞಾನ ವೃದ್ಧಿಯಾಗುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.
*ದೀರ್ಘ ಕಾಲದಿಂದ ಭೇಟಿಯಾಗದ ಉತ್ತಮ ಸ್ನೇಹಿತರಿಗೆ ಕರೆಮಾಡಿ ಮಾತನಾಡಿ. ಇಲ್ಲವೇ ಸಾಧ್ಯವಾದರೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆಯಿರಿ.
* ನಿಮಗೆ ಇಷ್ಟವಾದ ಯಾವುದಾರು ಒಂದು ಅಡುಗೆಯನ್ನು ಮಾಡಿ. ಅದ್ರಲ್ಲೂ ಹೊಸ ರೆಸಿಪಿಯನ್ನು ಟ್ರೈ ಮಾಡಿ.
* ಕೆಲಸದ ಒತ್ತಡದಿಂದ ನೀವು ಬೇಗ ರಿಲೀಫ್ ಆಗ್ಬೇಕಾದ್ರೆ ಧ್ಯಾನ ಮಾಡೋದು ತುಂಬಾ ಅಗತ್ಯ. ಇದಕ್ಕಾಗಿ ನಿಮ್ಮ ಎಲ್ಲಾ ಸಮಯವನ್ನು ವ್ಯಯ ಮಾಡುವುದು ಬೇಡ. ದಿನದಲ್ಲಿ 10 ರಿಂದ 20 ನಿಮಿಷ ಧ್ಯಾನ ಮಾಡಿದರೆ ಸಾಕು. ಆದರೆ ಈ ಅಭ್ಯಾಸವನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದಾಗಿ ಮಾಡಿಕೊಳ್ಳಿ.
* ಮಾನಸಿಕ ಒತ್ತಡಕ್ಕೆ ದೈಹಿಕ ಶ್ರಮವೂ ಕಾರಣವಾಗಿರುತ್ತದೆ. ದೈಹಿಕವಾಗಿ ಸಧೃಡರಾಗಲು ಯೋಗ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.
* ಒಂದೊಳ್ಳೆ ಮ್ಯೂಸಿಕ್ ಕೇಳಿದ್ರೆ ಎಷ್ಟೇ ಟೆನ್ಷನ್ ಇದ್ರು ಮಾಯ ಆಗುತ್ತೆ ಹಾಗಾಗಿ ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ.
* ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳೊಂದಿಗೆ ವಾಕಿಂಗ್ ಹೋಗಿ.
Related Articles
Thank you for your comment. It is awaiting moderation.
Comments (0)