ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂ, ಮುಸ್ಲೀಮ್: ಸಿ.ಎಂ.ಸಿದ್ದರಾಮಯ್ಯ
- by Suddi Team
- May 17, 2025
- 141 Views

ಮಂಗಳೂರು: ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು,ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು ಎಂದರು.
ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ,ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.
Related Articles
Thank you for your comment. It is awaiting moderation.
Comments (0)