ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಸ್ಮಾರ್ಟ್ ಕಿಯೋಸ್ಕ್ ಯಂತ್ರ ಸ್ಥಾಪನೆ
- by Suddi Team
- June 24, 2020
- 57 Views

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಸಹಾಯದಿಂದ ನಿರ್ವಹಿಸಬಹುದಾದ ಸ್ವಯಂಚಾಲಿತ ಸ್ಮಾರ್ಟ್ ಕಿಯೋಸ್ಕ್ ಯಂತ್ರ ಸ್ಥಾಪನೆ ಉದ್ಘಾಟಿಸಲಾಯಿತು.
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಥರ್ಮಲ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಜೊತೆಗೆ, ಪ್ರಯಾಣಿಕರ ರೈಲು ಇರುವ ಮುನ್ನ ಅವರ ಟಿಕೇಟುಗಳನ್ನು ಪರೀಕ್ಷಿಸಬೇಕಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ವನ್ನು ತಡೆಗಟ್ಟುವ ಸಲುವಾಗಿ ಮಾನವ ಸಂಪರ್ಕವಿಲ್ಲದ ಈ ಕ್ರಮಗಳನ್ನು ಕೈಗೊಳ್ಳಲು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ಸಕ್ಷಮ್ ಯಂತ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.
ಸಕ್ಷಮ್ ಯಂತ್ರದ ಕಾರ್ಯ ನಿರ್ವಹಣೆ:
* ರೈಲು ನಿಲ್ದಾಣವನ್ನು ಪ್ರವೇಶಿಸುವ ಪ್ರಯಾಣಿಕರು ಯಂತ್ರದ ಬಳಿ ನಿಂತಾಗ ಅದರಲ್ಲಿ ಅಳವಡಿಸಿರುವ ಥರ್ಮಲ್ ಪರೀಕ್ಷಾ ಸಾಧನದ ಮೂಲಕ ಅವರ ಶರೀರದ ಉಷ್ಣತೆಯನ್ನು ಮತ್ತು ಅವರು ಮುಖದ ಮಾಸ್ಕ್ ಧರಿಸುವುದನ್ನು ಯಂತ್ರವು ದರ್ಶಕದಲ್ಲಿ ತೋರಿಸುತ್ತದೆ ಮತ್ತು ಯಂತ್ರ ದಿಂದ ದೂರದಲ್ಲಿ ಬೇರೆಡೆ ಇರುವ ಪರೀಕ್ಷಾ ಸಿಬ್ಬಂದಿಗಳು ಎಲ್ ಇ ಡಿ ಪರದೆಯ ಮೂಲಕ ನೋಡಬಹುದು.
ಪ್ರಯಾಣಿಕರು ಥರ್ಮಲ್ ಪರೀಕ್ಷೆ ನಂತರ ತಮ್ಮ ಟಿಕೆಟ್ ಮತ್ತು ಗುರುತಿನ ದಾಖಲೆಯನ್ನು ದರ್ಷಕದ ಮುಂದೆ ತೋರಿಸಿ, ಎಲ್ಲವು ಸಮರ್ಪಕವಾಗಿದ್ದಲ್ಲಿ ಪರೀಕ್ಷಾ ಸಿಬ್ಬಂದಿಯು ಮೈಕ್ನ ಮೂಲಕ ಮುಂದುವರೆಯಲು ಅನುಮತಿ ನೀಡುತ್ತಾರೆ, ಈ ಕಿಯೋಸ್ಕ್ (ಸಕ್ಷಮ್) ಯಂತ್ರವನ್ನು ಯಶವಂತಪುರ – ಶಿವಮೊಗ್ಗ ವಿಶೇಷ ರೈಲಿನ ಪ್ರಯಾಣಿಕರಿಂದ ಶ್ರೀ ಅಶೋಕ್ ಕುಮಾರ್ ವರ್ಮ, ವಿಭಾಗೀಯ ವ್ಯವಸ್ಥಾಪಕರು, ನೈರುತ್ಯ ರೈಲ್ವೆ ಮತ್ತು ವಿಭಾಗದ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಈ ಯಂತ್ರವನ್ನು ಪ್ರಾಯೋಜಿಸಿರುವ ಮ. ಫೀಮೇಸನ್ ಸರ್ಕಾರೇತರ ಸಂಸ್ಥೆ ಸದಸ್ಯರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಯಂತ್ರದ ಬೆಲೆ ಸುಮಾರು ರೂ 1.29 ಲಕ್ಷಗಳು.
Related Articles
Thank you for your comment. It is awaiting moderation.
Comments (0)