ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಚಿಕ್ಕಬಳ್ಳಾಪುರ: ಸಾಲ ಮಾಡಿ ಎರಡು ತಿಂಗಳಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದ ಮೂರು ಬೋರ್ ವೆಲ್ ವಿಫಲವಾದ ಹಿನ್ನೆಲೆ, ಸಾಲಕ್ಕೆ ಹೆದರಿ ಅನ್ನದಾತ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊ ಡ್ಡಬಳ್ಳಾಪುರ ತಾಲೂಕಿನ ಆಚಾರಲಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ರೈತ ಚಂದ್ರಶೇಖರ (41) ಆತ್ಮಹತ್ಯೆಗೆ ಶರಣಾದ ದುರ್ದೈವಿ, ಮೃತ ವ್ಯಕ್ತಿ ಒಂದೂವರೆ ಎಕರೆ ಸ್ವಂತ ಜಮೀನು ಮೂರು ಎಕರೆ ಗುತ್ತಿಗೆ ಜಮೀನಿನಲ್ಲಿ ರೇಷ್ಮೆ, ಮತ್ತು ಹೂ ಬೆಳೆಯುತ್ತಿದ್ದರು, ಎರಡು ತಿಂಗಳ ಅಂತರದಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದರು. ಮೂರು ಬೋರ್ ವೆಲ್ ನಲ್ಲಿ ನೀರು ಬತ್ತಿ ಹೋಗಿತ್ತು, ಬೋರ್‌ವೆಲ್ ಗಾಗಿ 3 ಲಕ್ಷ ಸೇರಿದಂತೆ ಒಟ್ಟು 8 ಲಕ್ಷ ಬ್ಯಾಂಕ್ ಮತ್ತು ಕೈ ಸಾಲ ಮಾಡಿದ್ದರು. ಬೋರ್‌ವೆಲ್ ಫೇಲ್ ಆದ ಹಿನ್ನೆಲೆ ಸಾಕಷ್ಟು ನೊಂದಿದ್ದ ರೈತ ಸಾಲಕ್ಕೆ ಹೆದರಿ ತನ್ನ ತೋಟದಲ್ಲಿ ವಿಷ ಕುಡಿದು ಆತ್ಮ ಹತ್ಯೆಗೆ ಶರಣಾಗಿದ್ದಾನೆ.
ಮೃತ ರೈತ ಹೆಂಡತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನ ಅಗಲಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಲ್ಲಿ ಪ್ರಕರಣ ನಡೆದಿದೆ.
Comments (0)