ಮೈತ್ರಿ ಸರ್ಕಾರದ ಸಚಿವರಿಗೆ ಕೊನೆಗೂ ಖಾತೆ ಭಾಗ್ಯ
- by Suddi Team
- June 8, 2018
- 108 Views
ಬೆಂಗಳೂರು : ಹಲವು ಬಿಕ್ಕಟ್ಟುಗಳ ಮಧ್ಯೆಯೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಇಂಧನ, ಹಣಕಾಸು, ಗುಪ್ತವಾರ್ತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ನೀಡಲಾಗಿದೆ.
ಕಳೆದ ಬಾರಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಿಕ್ಕಿದ್ದರೆ, ಎಚ್.ಡಿ ರೇವಣ್ಣ ಅವರಿಗೆ ಲೋಕೋಪಯೋಗಿ ಖಾತೆ ದೊರೆತಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿರಲಿಲ್ಲ.
ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ ಪಟ್ಟಿಯನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿದ್ದರು. ರಾಜ್ಯಪಾಲರು ಖಾತೆಗಳ ಪಟ್ಟಿಯನ್ನು ಅನುಮೋದಿಸಿದ್ದು, ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಯಾರಿಗೆ, ಯಾವ ಖಾತೆ :
ಹೆಚ್.ಡಿ. ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ
ಡಾ.ಜಿ. ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ
ಹೆಚ್.ಡಿ ರೇವಣ್ಣ – ಲೋಕೋಪಯೋಗಿ ಇಲಾಖೆ
ಆರ್.ವಿ ದೇಶಪಾಂಡೆ – ಕಂದಾಯ ಇಲಾಖೆ
ಡಿ.ಕೆ. ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ
ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ
ಬಂಡೆಪ್ಪ ಕಾಶಂಪುರ್ – ಸಹಕಾರ ಇಲಾಖೆ
ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ
ಯು.ಟಿ. ಖಾದರ್ – ನಗರಾಭಿವೃದ್ಧಿ / ವಸತಿ
ಸಿ.ಎಸ್. ಪುಟ್ಟರಾಜು – ಸಣ್ಣ ನೀರಾವರಿ
ಶಿವಶಂಕರ್ ರೆಡ್ಡಿ – ಕೃಷಿ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಇಲಾಖೆ
ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ
ಶಿವಾನಂದ ಪಾಟೀಲ್ – ಆರೋಗ್ಯ ಇಲಾಖೆ
ವೆಂಕಟರಮಣಪ್ಪ – ಕಾರ್ಮಿಕ ಇಲಾಖೆ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ
ಆರ್. ಶಂಕರ್ – ಅರಣ್ಯ ಮತ್ತು ಪರಿಸರ
ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ/ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ
ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ
ಜಿ.ಟಿ. ದೇವೇಗೌಡ – ಉನ್ನತ ಶಿಕ್ಷಣ
ಸಾ.ರಾ ಮಹೇಶ್ – ಪ್ರವಾಸೋದ್ಯಮ
ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಿ.ಸಿ. ತಮ್ಮಣ್ಣ – ಸಾರಿಗೆ
ಎಂ.ಸಿ. ಮನಗೂಳಿ – ತೋಟಗಾರಿಕೆ
ವೆಂಕಟರಾವ್ ನಾಡಗೌಡ- ಪಶುಸಂಗೋಪನೆ
ಗುಬ್ಬಿ ಶ್ರೀನಿವಾಸ್ – ಸಣ್ಣ ಕೈಗಾರಿಕೆ
Related Articles
Thank you for your comment. It is awaiting moderation.


Comments (0)