ಮಾಸ್ತಿಗುಡಿ ದುರಂತ ಪ್ರಕರಣ: ದುನಿಯ ವಿಜಯ್ ಬಂಧನ
- by Suddi Team
- June 8, 2018
- 100 Views
ಮಾಸ್ತಿಗುಡಿ ಚಿತ್ರದ ಚಿತ್ರೀಕ ರಣ ವೇಳೆ ನಡೆದಿದ್ದ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹಾಜರಾಗದೆ ಆರೋಪಿ ಸುಂದರ್ ಪಿ. ಗೌಡ ತಲೆಮರೆಸಿಕೊಂಡು ಓಡಾಡುತ್ತಿರುವ ಸಂಬಂಧ ಆರೋಪಿಗೆ ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ದುನಿಯ ವಿಜಯ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್ ಪಿ.ಗೌಡರನ್ನು ಬಂಧಿಸಲು ತಾವರೆಕೆರೆ ಪೊಲೀಸರು ತೆರಳಿದಾಗ ತಮ್ಮ ಮನೆಯಲ್ಲಿದ್ದ ಸುಂದರ್ ತಪ್ಪಿಸಿಕೊಳ್ಳು ವಿಜಯ್ ಸಹಾಯ ಮಾಡುವ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಾವರೆಕೆರೆ ಠಾಣೆ ಪೊಲೀಸ್ ಪೇದೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ನಟ ವಿಜಯ್ ವಿರುದ್ಧ ದೂರು ದಾಖಲಿಸಿದ್ದರು.
ಸುಂದರ್ ತಪ್ಪಿಸಿಕೊಳ್ಳಲು ಸಹಾಯಮಾಡುವುದಲ್ಲದೆ ದುನಿಯ ವಿಜಯ್ ಕೂಡ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ವಿಜಯ್ ಹುಡುಕಾಟಕ್ಕಾಗಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಶೇಷ ತಂಡ ರಚಿಸಿದ್ದರು. ಈ ವಿಶೇಷ ತಂಡ ವಿಜಯ್‌ರನ್ನು ತಮಿಳುನಾಡಿನಲ್ಲಿ ಬಂಧಿಸಿದ್ದು ಬೆಂಗಳೂರಿಗೆ ಕರೆ ತರಲಾಗುತ್ತಿದೆ.
ಪ್ರಕರಣ ಸಂಬಂಧ ದುನಿಯ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿಗೆ ಕರೆತಂದ ಕೂಡಲೇ ವಿಜಯ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಬಂಧನದ ಭೀತಿ ಎದುರಾಗಿತ್ತಿದ್ದಂತೆ ವಿಜಯ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಜಯ್‌ರನ್ನು ಬೆಳಗ್ಗೆ 8:30 ಕ್ಕೆ ಬಂಧಿಸಲಾಗಿತ್ತು. ಬಂಧನದ ಮಾಹಿತಿ ಕೋರ್ಟ್ ಗೆ ರವಾನೆಯಾಗಿತ್ತು. ನಿರೀಕ್ಷಣಾ ಜಾಮೀನು 12:30ಕ್ಕೆ ಮಂಜೂರಾಗಿದೆ. ಬಂಧನದ ಮಾಹಿತಿ ನ್ಯಾಯಾಲಯಕ್ಕೆ ತಿಳಿಸಿದ್ದರೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದೇ ಎಂಬ ಬಗ್ಗೆ ಪೊಲೀಸರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ನಾಳೆ ಬೆಳಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ವಿಜಯ್‌ರನ್ನು ಹಾಜರುಪಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
Related Articles
Thank you for your comment. It is awaiting moderation.


Comments (0)