ರಫೇಲ್ ವಿಷಯ ಮುಂದಿಟ್ಟು ಹೆಚ್ಎಎಲ್ ಟೀಕೆ: ಮಾಧನವನ್ ಅಸಮಧಾನ!

ಬೆಂಗಳೂರು: ರಫೇಲ್ ವಿಚಾರವನ್ನಿಟ್ಟುಕೊಂಡು ಹೆಚ್ ಎ ಎಲ್ ಸಾಮರ್ಥ್ಯ ದ ಬಗ್ಗೆ ಟೀಕೆ ಮಾಡಿದ್ರಿಂದ ಸಹಜವಾಗಿ ಬೇಸರವಾಗಿದೆ. ಆದ್ರೇ‌ ನಾವು ಈ‌ ವಿಚಾರದಲ್ಲಿ ಸ್ಥೈರ್ಯ ಕಳೆದುಕೊಂಡಿಲ್ಲ ಎಂದು ಹೆಚ್ಎಎಲ್ ಅಧ್ಯಕ್ಷ ಮಾಧವನ್ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜೊತೆ ಒಪ್ಪಂದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ರು.

ಯಲಹಂಕ ವಾಯುನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಧವನ್, ಹೆಚ್.ಎ.ಎಲ್ ನೇತೃತ್ವದಲ್ಲಿ ಶೋ ನಡೆಸಲಾಗ್ತಿದೆ. ಎರಡು ರೀತಿಯ ಇಂಜಿನ್ ಡಿಸ್‌ ಪ್ಲೇ ಹಾಕಲಾಗಿದೆ. ಹೊಸದಾಗಿ ಹೆಲಿಕಾಪ್ಟರ್ ತಯಾರಿಸಲಾಗಿದ್ದು, ನೌಕಾಸೇನೆಗೆ ಸಾಕಷ್ಟು ಉಪಯೋಗವಾಗಲಿದೆ. ಕಡಿಮೆ ತೂಕದ ಹೆಲಿಕಾಪ್ಟರ್‌ಗಳ ತಯಾರಿಕೆ ಮಾಡಲಾಗಿದೆ‌ ಎಂದರು.

ಹೆಚ್.ಎ.ಎಲ್ ನಷ್ಟದಲ್ಲಿದೆ ಅನ್ನೋದು ಸುಳ್ಳು ಮಾಹಿತಿ.
ಆರ್ಥಿಕವಾಗಿ ಹೆಚ್.ಎ.ಎಲ್ ಸದೃಡವಾಗಿದೆ. ಕಳೆದ ಡಿಸೆಂಬರ್ ಮಾಹಿತಿಯ ಪ್ರಕಾರ ಆರ್ಥಿಕತೆ ಹೆಚ್ಚಳವಾಗಿದೆ. ನೌಕರರಿಗೆ ಸಂಬಳ ಸಿಗದಿರೋದಕ್ಕೆ ಹಲವು ಕಾರಣಗಳಿವೆ.
ಹೊಸ ಹೊಸ ಪ್ರಾಜೆಕ್ಟ್‌ಗಳನ್ನ ಮಾಡಲು ನಾವು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

ಹೆಚ್.ಎ.ಎಲ್ ನಿರ್ಮಿತ ಮಿರಾಜ್ 2000 ವಿಮಾನ ಪತನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹೊಣೆಯನ್ನು ನಾವೇ ಹೊರುತ್ತೇವೆ. ಏರ್ ಫೋರ್ಸ್ ಗೆ ಎಲ್ಲಾ ರೀತಿಯಲ್ಲೂ ನಾವು ಸಹಕಾರ ನೀಡುತ್ತೇವೆ. LCA ಹೆಲಿಕಾಪ್ಟರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೆಚ್.ಎ.ಎಲ್ ನಿಂದ ರಫ್ತು ಮಾಡಲಾಗ್ತಿದೆ. IAF ನಿಂದ ಹೊಸ 83ಮಾಕ್ -1 ವಿಮಾನಕ್ಕೆ ಬೇಡಿಕೆ ಇಟ್ಟಿದ್ದಾರೆ. 2022ಕ್ಕೆ 83 ಮಾಕ್-1 ಸಿದ್ದವಾಗಲಿದೆ‌ ಎಂದು ಮಾಹಿತಿ ನೀಡಿದರು.

ಹೆಚ್.ಎ.ಎಲ್ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಆದ್ರೆ ಸಂಸ್ಥೆಯಿಂದ ಯಾವುದೇ ಮಾಹಿತಿ ನೀಡುವುದಿಲ್ಲ. ಪದೇ ಪದೇ ಏರ್ ಕ್ರಾಫ್ಟ್ ಆಗ್ತಿರೋದ್ರಿಂದ ಯಾವುದೇ ಸಮಸ್ಯೆ ಇಲ್ಲ. ನಮಗೆ ಬರುವ ವಿಮಾನ ತಯಾರಿಕೆ ಆರ್ಡರ್‌ನಲ್ಲಿ ಕಡಿಮೆಯಾಗಿಲ್ಲ. ಹೆಚ್ಎಎಲ್ ಗುಣಮಟ್ಟ ಕಡಿಮೆಯಾಗಿದೆ ಅನ್ನೋದು ಸುಳ್ಳು ನಾವು ಕ್ವಾಲಿಟಿಯ ಜೊತೆಗೆ‌ ಎಂದೂ ರಾಜೀ ಮಾಡಿಕೊಂಡಿಲ್ಲ. ನಾವು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದೇವೆ ಎಂದರು.

Related Articles

Comments (0)

Leave a Comment