ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಮಂಡ್ಯ: ತಾಯಿಯನ್ನು ಕೆಟ್ಟದಾಗಿ ಕಂಡವನ ತಲೆ ಕಡಿದ ಮಗ ರುಂಡ ಹಿಡಿದುಕೊಂಡು ನೇರವಾಗಿ ಪೋಲಿಸ್ ಸ್ಟೇಷನ್ಗೆ ಬಂದು ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕ ಬಾಗಿಲು ಗ್ರಾಮದಲ್ಲಿ ನಡೆದಿದೆ.
ತಾಯಿಗೆ ಕೆಟ್ಟದಾಗಿ ಸನ್ನೆಮಾಡಿ ಕರೆದಿದ್ದಕ್ಕೆ ಕೋಪಗೊಂಡ ಮಗ ಪಶುಪತಿ (28), ಗಿರೀಶ್ (38) ಎಂಬಾತನನ್ನು ಕೊಲೆಗೈದಿದ್ದಾನೆ.
ಗಿರೀಶನ ತಲೆಯನ್ನು ಕತ್ತರಿಸಿದ ಪಶುಪತಿ, ರುಂಡ ಕಡಿದುಕೊಂಡು ನೇರವಾಗಿ ಪೋಲಿಸರಿಗೆ ಶರಣಾಗಿದ್ದಾನೆ. ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದವನ ಬಿಟ್ಟರೆ ನಾನು ಬದುಕಿದ್ದು ಸತ್ತಂತೆ. ಹೀಗಾಗಿ ಗಿರೀಶ್ ನ ಹತ್ಯೆ ಮಾಡಿದ್ದೇನೆ ಎಂದು ಪಶುಪತಿ ಪೊಲೀಸರ ಮುಂದೆ ಹೇಳಿದ್ದಾನೆ.
ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲೂ ರುಂಡ ಕಡಿದಿದ್ದ ಘಟನೆ ನಡೆದಿತ್ತು.
Comments (0)