ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರೆದ ಐಪಿಎಸ್ ಅಧಿಕಾರಿಗಳ ವರ್ಗಾವಣೆ!
- by Suddi Team
- September 15, 2018
- 158 Views
ಬೆಂಗಳೂರು: ಮೀಟರ್ ಬಡ್ಡಿ ದಂಧೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವ ಸಲುವಾಗಿ ಪೊಲೀಸ್ ಇಲಾಖೆ ವರ್ಗಾವಣೆ ಪ್ರಕ್ರಿಯೆಯನ್ನು ಸಮ್ಮಿಶ್ರ ಸರ್ಕಾರ ಮುಂದುವರೆಸಿದ್ದು, 25 ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಡಿಜಿಪಿಯಾಗಿ ಬೆಂಗಳೂರು ನಗರ ಕಿಮಿನಲ್‌ಗಳನ್ನು ನಡುಗಿಸಿ, ನಂತರ ಲಾಟರಿ ದಂಧೆಯಲ್ಲಿ ಭಾಗಿಯಾದ ಆರೋಪ ಎದುರಿಸಿದ್ದ ಅಲೋಕ್ ಕುಮಾರ್ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಬೆಂಗಳೂರು ಕ್ರೈಂ ವಿಭಾಗದ ಎಡಿಜಿಪಿಯಾಗಿ ಅಲೋಕ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳು ಮತ್ತು ಹುದ್ದೆ
ಅಲೋಕ್ ಮೋಹನ್- ಎಡಿಜಿಪಿ ರೈಲ್ವೆ ಹೆಚ್ಚುವರಿ
ಪಿ.ಎಸ್.ಸಂಧು- ಎಡಿಜಿಪಿ ಸಂಚಾರಿ ವಿಭಾಗ ಬೆಂಗಳೂರು
ಸಿ.ರವೀಂದ್ರನಾಥ್- ಎಡಿಜಿಪಿ ಅರಣ್ಯ ವಿಭಾಗ ಬೆಂಗಳೂರು
ಸಂಜಯ್ ಸಹಾಯ್ – ಎಡಿಜಿಪಿ ಕಂಪ್ಯೂಟರ್ ವಿಭಾಗ ಬೆಂಗಳೂರು
ಅಲಿಕ್ ಎನ್.ಎಸ್ ಮೂರ್ತಿ – ಎಡಿಜಿಪಿ ಕರ್ನಾಟಕ ಲೋಕಾಯುಕ್ತ ವಿಭಾಗ
ಸತೀಶ್ ಕುಮಾರ್.ಎನ್ – ಡಿಐಜಿ ರಿಸರ್ವ್ ಪೊಲೀಸ್
ಸಂದೀಪ್ ಪಾಟೀಲ್ – ಡಿಐಜಿ ಸಿಎಆರ್ ವಿಭಾಗ
ಡಾ. ಪಿ. ಎಸ್ ಹರ್ಷ- ಡಿಐಜಿ ಬಂಧಿಖಾನೆ
ಕೆ.ಟಿ.ಬಾಲಕೃಷ್ಣ – ಎಸ್ ಪಿ ಗುಪ್ತಚರ ಇಲಾಖೆ
ರಾಜೇಂದ್ರ ಪ್ರಸಾದ್ – ಎಸ್ ಪಿ ವೈರ್ ಲೆಸ್ ವಿಭಾಗ
ರಾಮನಿವಾಸ್ ಸಫಟ್ – ಎಸ್ ಪಿ ಎಸಿಬಿ
ಮಾರ್ಟಿನ್ ಮಾರಬಿಂಗ್ – ಡಿಸಿಪಿ ಸಂಚಾರ ಪಶ್ಚಿಮ ವಲಯ
ಭೀಮ್ ಶಂಕರ್ ಗುಳೇದ್ – ಎಸ್ ಪಿ ರೈಲ್ವೆ ವಿಭಾಗ
ರಾಧಿಕಾ – ಎಸ್ ಪಿ ಡಿಜಿಪಿ ಕಚೇರಿ
ಹನುಮಂತರಾಯ – ಎಸ್ ಪಿ ಯಾದಗಿರಿ
ಗಿರೀಶ್ – ಡಿಸಿಪಿ ಕ್ರೈಂ ಬೆಂಗಳೂರು
ಎ ಎನ್ ಪ್ರಕಾಶ್ ಗೌಡ – ಎಸ್ ಪಿ ಹಾಸನ
ಜಗದೀಶ್ – ಡಿಸಿಪಿ ಪೂರ್ವ ಟ್ರಾಫಿಕ್ ವಿಭಾಗ ಬೆಂಗಳೂರು
ಚೈತ್ರ – ಎಸ್ ಪಿ ಡಿಸಿಆರ್‌ಇ ಬೆಂಗಳೂರು
Related Articles
Thank you for your comment. It is awaiting moderation.


Comments (0)