ಬೆಂಗಳೂರು: ಕಾಂಗ್ರೆಸ್ ನಲ್ಲಿ ನಾನು ಏಕಾಂಗಿಯಲ್ಲ,ಏಕಾಂಗಿ ಜಾಯಮಾನವೂ ನಂದಲ್ಲ ಎನ್ನುವ ಮೂಲಕ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟವಾಗಿ ತಳ್ಳಿಹಾಕಿದರು.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು,ನಾನು ಪಕ್ಷದಲ್ಲಿ ಯಾವತ್ತೂ ಎಕಾಂಗಿಯಾಗಿಲ್ಲ.ಎಕಾಂಗಿ ನನ್ನ ಜಾಯಮಾನವಲ್ಲ.ಎಲೆಕ್ಷನ್ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ,ಅದಕ್ಕೆ ನಾನು ಪಕ್ಷದ ಸಭೆಗಳಲ್ಲಿ ಕಾಣಿಸಲ್ಲ ಸರ್ಕಾರ ರಚನೆ ನಂತರ ನನ್ನನ್ನು ಕಡೆಗಣಿಸಲಾಗುತ್ತಿದೆ ಅನ್ನೋದು ಸರಿಯಿಲ್ಲ.ದೇವಸ್ಥಾನಗಳಿಗೆ ನಾನು ಹೋಗಲೇಬಾರದಾ ಎನ್ನುವ ಮೂಲಕ ಸಂಪು ರಚನೆ ಸಂಬಂಧ ನಡೆದ ಸಭೆಗಳಲ್ಲಿ ಹೋಗದಿರವುದಕ್ಕೆ ಕಾರಣ ನೀಡಿದರು.
ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯದಲ್ಲಿ ಇರಬೇಕೋ ಅನ್ನೋದನ್ನು ಪಕ್ಷ ತೀರ್ಮಾನ ಮಾಡಲಿದೆ.
ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎನ್ನುವ ಮೂಲಕ ಚಂಡನ್ನು ಡಿಕೆಶಿ ಹೈಕಮಾಂಡ್ ಅಂಗಳಕ್ಕ ಎಸೆದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್ ಆರ್ ಪಾಟೀಲ ಯಾಕೆ ರಾಜೀನಾಮೆ ಕೊಟ್ಟರು ಅಂತ ಗೊತ್ತಿಲ್ಲ.ಅವರು ಪ್ರಮುಖ ನಾಯಕರು.ದಕ್ಷಿಣ ಕರ್ನಾಟಕದ ಭಾಗದಲ್ಲಿಒಕ್ಕಲಿಗರು ಇದ್ದಾರೆ.ಅಲ್ಲಿ ವೀರಶೈವ ಸಮೂದಾಯ ಹೆಚ್ಚಿದೆ.
ಚುನಾವಣೆಯಲ್ಲಿ ನಮಗೆ ಓಟ್ ಹಾಕಿದ ಜನ ಸಹ ರಾಜ್ಯದಲ್ಲಿ ಇದ್ದಾರೆ.ಎಲ್ಲರ ಬಗ್ಗೆ ಹೈಕಮಾಂಡ್ ಯೋಚನೆ ಮಾಡಲಿದೆ.
ವೀರಶೈ ರನ್ನು ಕಡೆಗಣಿಸಲು ಸಾಧ್ಯವಿಲ್ಲ.ಸಚಿವ ಸಂಪುಟ ರಚನೆ ವೇಳೆ ವೀರಶೈವರನ್ನು ನೋಡಬೇಕಾಗುತ್ತದೆ ಎಂದು
ಎಸ್ ಆರ್ ಪಾಟೀಲ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡಿದರು.
ಇಂಧನ ಖಾತೆಗಾಗಿ ಕ್ಯಾತೆ ವಿಚಾರ ಸಂಬಂಧ
ಸಿಎಂ ಕುಮಾರಸ್ವಾಮಿ ಯಾವ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ರಿಯಾಕ್ಟ್ ಮಾಡಲ್ಲ.ಅವರು ಎನ್ ಹೇಳಿದ್ದಾರೋ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)