ಟೀಂ ಇಂಡಿಯಾ ಮಾಜಿ ಕಫ್ತಾನ ಅಜಿತ್ ವಾಡೇಕರ್ ನಿಧನ
- by Suddi Team
- August 16, 2018
- 136 Views
ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನರಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಬೈನ ಜಸ್ ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅವರಿಗೆ 77 ವರ್ಷ ವಯಸ್ಸಾಗಿತ್ತು.
1941 ಏ.1ರಂದು ಜನಿಸಿದ್ದ ಅಜಿತ್ ಲಕ್ಷ್ಮಣ್ ವಾಡೇಕರ್
1958 – 59ರಲ್ಲಿ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. 37 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದರು.1971ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಡ್ನಲ್ಲಿ ನಡೆದ ಪಂದ್ಯಗಳ ಐತಿಹಾಸಿಕ ಗೆಲುವಿಗೆ ಈ ಸ್ಫೋಟಕ ಎಡಗೈ ಬ್ಯಾಟ್ಸಮನ್ ಕಾರಣ ಆಗಿದ್ದರು.
ಕ್ರಿಕೆಟ್ ಆಟಗಾರ,ತಂಡದ ನಾಯಕ,ಟೀಂ ಮ್ಯಾನೇಜರ್,ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಜಿತ್ ವಾಡೇಕರ್ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿ ಟ್ವೀಟ್ ಮಾಡಿದೆ.ಮಾಜಿ ಕ್ರಿಕೆಟಿಗರು,ಟೀಂ ಇಂಡಿಯಾ ಆಟಗಾರರು ಕೂಡ ಸಂತಾಪ ಸೂಚಿಸಿದ್ದಾರೆ.
Related Articles
Thank you for your comment. It is awaiting moderation.


Comments (0)