ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಬೆಂಗಳೂರು:ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆ ಸಂಚಾರದಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿನ ಐಶಾರಾಮಿ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಸ್ಥಗಿತಗೊಳಿಸಿದೆ.
ಬೆಂಗಳೂರಿನಿಂದ ತೆರಳುವ ಬಸ್ ಸೇವೆ ಸ್ಥಗಿತಕ್ಕೆ ಕೆಎಸ್.ಆರ್.ಟಿಸಿ ನಿರ್ಧಾರಿಸಿದ್ದು ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರಕ್ಕೆ ಪ್ರೀಮಿಯಂ ಮಾದರಿಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಾರ್ಮಾಡಿ ಮಾರ್ಗವಾಗಿ ಎಕ್ಸ್ಪ್ರೆಸ್ ಬಸ್ ಹೊರತುಪಡಿಸಿ ಉಳಿದೆಲ್ಲಾ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.ಆದರೆ ಚಾರ್ಮಾಡಿ ಮಾರ್ಗವಾಗಿ ಕೆಎಸ್.ಆರ್.ಟಿಸಿಯ ಎಕ್ಸ್ಪ್ರೆಸ್ ಬಸ್ ಗಳು ಸಂಚಾರ ನಡೆಸುತ್ತಿವೆ.
ಮಂಗಳೂರು ಮೈಸೂರು ನಡುವಿನ 40 ಹಾಗು ಮಂಗಳೂರು ಬೆಂಗಳೂರು ನಡುವಿನ 49 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.
Comments (0)