ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ತುಮಕೂರು: ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮತ್ತೆ ಸ್ವಯಂ ಪ್ರೇರಣೆಯಿಂದ ನಡೆದಾಡಲು ಶ್ರೀಗಳು ಮುಂದಾಗಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಶ್ರೀಗಳು ಅನಾರೋಗ್ಯಕ್ಕೆ ಈಡಾಗಿದ್ದರು. ಶ್ರೀಗಳಿಗೆ ಮಠದಲ್ಲೇ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ, ಈಗಾಗಲೇ ಶ್ರೀಗಳ ದೇಹದಲ್ಲಿ ೮ ಸ್ಟಂಟ್ ಅಳವಡಿಸಲಾಗಿದೆ. ಅನಾರೋಗ್ಯದಿಂದ ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು.
ಇದೀಗ ಆರೋಗ್ಯ ಚೇತರಿಕೆಯಿಂದ ನೂರ ಹನ್ನೊಂದರ ಹರೆಯದ ಸಿದ್ದಗಂಗಾ ಮಠದ ಶ್ರೀಗಳು ಯಾರ ನೆರವಿಲ್ಲದೆ ನಡೆದಾಡಲು ಮುಂದಾಗಿದ್ದಾರೆ. ಮೂಲ ಮಠದಿಂದ ಸಾರ್ವಜನಿಕ ದರ್ಶನ ಸ್ಥಳಕ್ಕೆ ಶ್ರೀಗಳ ನಡೆದುಕೊಂಡು ಬಂದರು. ಶ್ರೀಗಳ ನಡಿಗೆ ಕಂಡು ಭಕ್ತರಲ್ಲಿ ಹರ್ಷ ಮೂಡಿದೆ.
Comments (0)