ಸಮ್ಮಿಶ್ರ ಸರ್ಕಾರ ನಡೆಸೋದು ಗೊತ್ತು: ಹೆಚ್ಡಿಕೆ ಟಾಂಗ್!
- by Suddi Team
 - June 4, 2018
 - 87 Views
 
ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದು ಚನ್ನಾಗಿ ಗೊತ್ತಿದೆ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು,ಸಧ್ಯದಲ್ಲೇ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.ಆದರೆ ಈ ಸಮ್ಮಿಶ್ರ ಸರ್ಕಾರವನ್ನು ಯಾವ ರೀತಿ ಮ್ಯಾನೆಜ್ ಮಾಡೊದು ಎನ್ನುವುದು ನಂಗೆ ಗೊತ್ತು.ಐದು ವರ್ಷ ಸುಭದ್ರ ಸರ್ಕಾರ ನಿಡುತ್ತೇನೆ.ಯಾವುದೆ ಅನುಮಾನ ಬೇಡ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನನ್ನದೆ ಆದ ಕಾರ್ಯಕ್ರಮ ಇದೆ.ಆ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ,ಗುಣಮಟ್ಟದ ಶಿಕ್ಷಣದ ಮೂಲಕ ಯುವ ಸಮೂಹದ ಶೈಕ್ಷಣಿಗ ಗುಣಮಟ್ಟದ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆಡಳಿತದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬದ್ದವಾಗಿದ್ದೇನೆ.ಈಗಾಗಲೇ ವಿಶೇಷ ವಿಮಾನ ಬಳಕೆ ಮಾಡುವುದನ್ನು ನಾನು ನಿರ್ಭಂದಿಸಿದ್ದೇನೆ.ನಾನು ನನ್ನ ಸ್ವಂತ ಕಾರು ಬಳಸುತ್ತಿದ್ದು,ಕಾರಿನ ಖರ್ಚು ವೆಚ್ಚ ಕೂಡಾ ನಾನೆ ಭರಿಸುತ್ತಿದ್ದೇನೆ ಎಂದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)