ಔಷಧ ನಿಯಂತ್ರಣ ಕಟ್ಟಡ ಉದ್ಘಾಟನೆ ಮಾಡಿದ: ಡಿಸಿಎಂ ಪರಂ
- by Suddi Team
- July 21, 2018
- 119 Views
ಬೆಂಗಳೂರು: ಗುಣಮಟ್ಟದ ಔಷಧ ಉತ್ಪಾದನೆ ಹೆಚ್ಚಿಸಿ, ವಾಣಿಜ್ಯೀಕರಣಗೊಳಿಸಿದರೆ ‘ಬೆಂಗಳೂರು ಔಷಧ ಹಬ್’ ಆಗುವುದರಲ್ಲಿ ಅನುಮಾನವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಅರಮನೆ ರಸ್ತೆಯಲ್ಲಿ ನಿರ್ಮಿಸಿರುವ ಔಷಧ ನಿಯಂತ್ರಣ ಇಲಾಖೆಯ ಬೃಹತ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಔಷಧ ತಯಾರಕರ ಜವಾಬ್ಧಾರಿ ದೊಡ್ಡದು. ನಿಮ್ಮ ಔಷಧಿಗೆ ಪ್ರತ್ಯೇಕ ಲ್ಯಾಬರೇಟರಿ ಇರಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿರುವುದು ಒಳ್ಳೆಯದು. ಡ್ರಗ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಜವಾಬ್ಧಾರಿ ದೊಡ್ಡದಿದೆ. ನಿಮ್ಮ ಗಮನಕ್ಕೆ ಬಾರದೇ ಯಾವುದೇ ಔಷಧ ಮಾರುಕಟ್ಟೆಗೆ ಬರಬಾರದು ಎಂದು ಸಲಹೆ ನೀಡಿದರು.
ಇನ್ನು, ಕೆಲವು ಮೆಡಿಕಲ್ ಶಾಪ್ಗಳು ಲೈಸೆನ್ಸ್ ಇಲ್ಲದೇ ನಡೆಸುತ್ತಿದ್ದಾರೆ. ಕೆಲವು ಅವಧಿ ಮುಗಿದ ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಗಮನವಹಿಸಿ ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.
ಇನ್ನು, ಡ್ರಗ್ಸ್ ಕೂಡ ದೊಡ್ಡ ಜಾಲವಾಗಿದೆ. ಈ ಡ್ರಗ್ಸ್ ನಿಯಂತ್ರಣ ಮಾಡದಿದ್ದರೆ ಯುವ ಪೀಳಿಗೆ ತೊಂದರೆಗೆ ಸಿಲುಕುತ್ತಾರೆ. ಔಷಧ ನಿಯಂತ್ರಕರು ಇಂಥವರ ಬಗ್ಗೆ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆಗೆ ಸುಲಭವಾಗಲಿದೆ ಎಂದರು.
Related Articles
Thank you for your comment. It is awaiting moderation.


Comments (0)