ಕೃಷಿಗೆ ಇಸ್ರೇಲ್ ತಂತ್ರಜ್ಞಾನದ ಟಚ್:ಬ್ಲೂ ಪ್ರಿಂಟ್ ಸಿದ್ದ?
- by Suddi Team
 - June 3, 2018
 - 93 Views
 
ಬೆಂಗಳೂರು: ಇಸ್ರೇಲ್ ಮಾದರಿ ಕೃಷಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಮಂಡ್ಯ ಜಿಲ್ಲೆಯ ವಿಸಿ ಫಾರಂನಲ್ಲಿ ಪೈಲಟ್ ಪ್ರಾಜೆಕ್ಟ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಜಾರಿಗೆ ನೀಲಿನಕ್ಷೆ ತಯಾರು ಮಾಡುತ್ತೇವೆ,
ಇಸ್ರೇಲ್ ತಂತ್ರಜ್ಞಾನ ಅಳವಡಿಕೆ ಮೂಲಕ ಕೃಷಿ ಮಾಡುವ ಕುರಿತು ರಾಜ್ಯದ ರೈತರಿಗೆ ಮಾರ್ಗದರ್ಶನ ಮಾಡಲು ಇಸ್ರೇಲ್ ನಿಂದ ಅಧಿಕಾರಿಗಳು ಮತ್ತು ರೈತರ ತಂಡ ರಾಜ್ಯಕ್ಕೆ ಬರಲಿದೆ ಈಗಾಗಲೇ ಈ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.
ರಾಜ್ಯದಲ್ಲಿ ಅವಧಿಪೂರ್ವವಾಗಿ ಮುಂಗಾರು ಆರಂಭವಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಈವರೆಗೆ ಶೇ.೫೧ ರಷ್ಟು ಹೆಚ್ಚು ಮಳೆಯಾಗಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗಬಾರದು. ರೈತರಿಗೆ ಗೊಬ್ಬರ ಔಷಧಿ ಬಿತ್ತನೆ ಬೀಜ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಪಾವತಿಗೆ ಆದೇಶಿಸಿದ್ದೇವೆ. ಈಗಾಗಲೇ ನೋಟೀಸ್ ಕೂಡ ಜಾರಿ ಮಾಡಲಾಗಿದೆ. ಕಾರ್ಖಾನೆ ಮಾಲೀಕರು ರೈತರಿಗೆ ಸಹಕಾರ ಕೊಡಬೇಕು.
ಹಾಲುದರ ಇಳಿಕೆಗೆ ಆಕ್ಷೇಪವಿಲ್ಲ: ರೈತರಿಂದ ಖರೀದಿಸುವ ಹಾಲು ದರ ಕಡಿಮೆ ಮಾಡುವ ಕುರಿತು ಒಕ್ಕೂಟಗಳಿಂದ ಯಾವುದೇ ಪ್ರಸ್ತಾಪ ಬಂದಿಲ್ಲ. ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಪ್ರತಿದಿನ ೮೨ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತಿದೆ. ಆದರೆ, ರಾಜ್ಯಕ್ಕೆ ಬೇಕಾಗಿರೋದು ೩೬ ಲಕ್ಷ ಲೀಟರ್ ಹಾಲು ಮಾತ್ರ. ಹೀಗಾಗಿ ಬಹಳಷ್ಟು ಜಿಲ್ಲಾ ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ನಷ್ಟವನ್ನು ಸರಿದೂಗಿಸಲು ಆ ಒಕ್ಕೂಟಗಳು ಚಿಂತನೆ ಮಾಡಿರಬಹುದು. ಆದ್ದರಿಂದ, ಆ ಬಗ್ಗೆ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)