ಅನ್ನಭಾಗ್ಯದಡಿ 7 ಕೆಜಿ ಅಕ್ಕಿ ವಿತರಣೆ: ಜಮೀರ್ ಅಹಮದ್
- by Suddi Team
- July 17, 2018
- 100 Views
ಬೆಂಗಳೂರು:ಅನ್ನಭಾಗ್ಯ ಯೋಜನೆಯಡಿ ಈ ತಿಂಗಳು 7 ಕೆಜಿ ವಿತರಣೆ ಮಾಡಲಿದ್ದು,ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆಯಂತೆ ಮುಂದಿನ ತಿಂಗಳು ಎಷ್ಟು ಅಕ್ಕಿ ವಿತರಣೆ ಮಾಡಬೇಕು ಎಂದು ನಿರ್ಧರಿಸಲಾಗುತ್ತೆ ಅಂತಾ ಆಹಾರ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್,
ಅನ್ನಭಾಗ್ಯಯೋಜನೆಯಡಿ ನೀಡುವ 7 ಕೆಜಿ ಅಕ್ಕಿಯಲ್ಲಿ 2 ಕೆ.ಜಿ. ಅಕ್ಕಿ ಕಡಿತ ಮಾಡುವುದಾಗಿ ಸಿಎಂಎಲ್ಲೂ ಹೇಳಿಲ್ಲ ಸದನದಲ್ಲೂ ಉತ್ತರ ಕೊಡುವಾಗ ಅವರೇ ಹೇಳಿದ್ದಾರೆ ಈ ಭಾರಿಯೂ 7 ಕೆ.ಜಿ.ಅಕ್ಕಿ ನೀಡುತ್ತೇವೆ. ನನ್ನ ಕರೆದು 5 ಕೆ.ಜಿ.ಕೊಡಿ ಅಂತ ಎಲ್ಲೂ ಚರ್ಚಿಸಿಲ್ಲ ಇದರಿಂದ ಈ ತಿಂಗಳು 7ಕೆ.ಜಿ.ಮುಂದುವರಿಸುತ್ತೇವೆ ಅವರು ಕರೆದು 5 ಕೆ.ಜಿ.ಕೊಡಿ ಅಂದ್ರೆ ಅಷ್ಟೇ ನೀಡುತ್ತೇವೆ ಎಂದ್ರು.
ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ವರದಿ ವಿಚಾರ ಸಂಬಂಧ ಹೇಳಿಕೆ ನೀಡಿದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್,ಈಗ ಕೇಸ್ ಕೋರ್ಟ್ ನಲ್ಲಿದೆ ನ್ಯಾಯಾಲಯದಲ್ಲಿ ತನಿಖೆ ಮುಂದುವರಿದಿದೆ ಕೋರ್ಟ್ ನಲ್ಲಿದ್ದಾಗ ಸಿಬಿಐಗೆ ಹೇಗೆ ಕೊಡೋಕೆ ಬರುತ್ತೆ ಬಿಜೆಪಿಯವರದ್ದೇ ಆಗ ಒಂದು ವರ್ಷ ಸರ್ಕಾರವಿತ್ತು ಸತ್ಯ ಇದ್ದಿದ್ದರೆ ಅವರು ಯಾಕೆ ಸುಮ್ಮನಾಗ್ತಿದ್ದರು
ಅವರೇ ಕ್ರಮ ಕೈಗೊಳ್ಳಬಹುದಿತ್ತಲ್ಲ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಕ್ಯಾಬಿನೆಟ್ ನಲ್ಲೂ ಅದೂ ವಜಾ ಆಗಿದೆ ಹೈಕೋರ್ಟ್ ನಲ್ಲೂ ಅದು ನಿಂತಿಲ್ಲ ಸದನದಲ್ಲೂ ಪ್ರಸ್ತಾಪವಾಗುತ್ತು,ಚರ್ಚೆಯನ್ನೇ ಮಾಡಲಿಲ್ಲ ಎಂದು
ಬಿಎಸ್ ವೈ ಆರೋಪಕ್ಕೆ ಟಾಂಗ್ ನೀಡಿದ್ರು.
ವಕ್ಫ್ ಆಸ್ತಿ ದೇವರ ಆಸ್ತಿಇದ್ದಂತೆ ಮುಜರಾಯಿ ದೇವಸ್ಥಾನದ ಆಸ್ತಿ ಕೂಡ ದೇವರಿದ್ದಂತೆ ಅದನ್ನ ತಿಂದವರು ಯಾರೂ ಉದ್ಧಾರವಾಗಿಲ್ಲ.ವಿಡ್ಸಂರ್ ಮ್ಯಾನರ್ ಹೊಟೇಲ್ ವಕ್ಫ್ ಆಸ್ತಿ 33 ವರ್ಷ ಲೀಸ್ ಗೆ ನೀಡಲಾಗಿತ್ತು ಲೀಸ್ ಅವಧಿ ಈಗ ಮುಗಿದುಹೋಗಿದೆ.ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಕೋರ್ಟ್ ನಲ್ಲಿ ಜಯ ಸಿಗುವ ವಿಶ್ವಾಸವಿದೆ ಅದೇಗೆ ಅವರಿಗೆ ಸೇರುತ್ತದೆ,ಸಮುದಾಯದ ಆಸ್ತಿ ಎಂದ್ರು.
ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರದ ಬಗ್ಗೆ ನಾನು ಏನೂ ಮಾತನಾಡಲ್ಲ ನನ್ನ ಇಲಾಖೆ ಬಗ್ಗೆ ಮಾತ್ರ ಕೇಳಿ
ನೋ ಕಮೆಂಟ್ಸ್ ..ನೋ ಕಮೆಂಟ್ಸ್ ಅಂದ್ರು ಜಮೀರ್.
Related Articles
Thank you for your comment. It is awaiting moderation.


Comments (0)