ಫ್ರಾನ್ಸ್ ಮುಡಿಗೆ ಫುಟ್ಬಾಲ್ ವಿಶ್ವಕಪ್ ಕಿರೀಟ
- by Suddi Team
- July 15, 2018
- 80 Views

ಮಾಸ್ಕೊ: ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗರೀಟವನ್ನು ಮುಡಿಗೇರಿಸಿಕೊಂಡಿದೆ.
ರಷ್ಯಾದ ಮಾಸ್ಕೋದಲ್ಲಿರುವ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು.
ಕ್ರೊವೇಷಿಯಾದ ಮಾರಿಯೊ ಮಂಡ್‌ಜುಕಿಚ್ 18ನೇ ನಿಮಿಷದಲ್ಲಿ ಸ್ವಂತ ಗೋಲು ಬಾರಿಸಿ ತಪ್ಪು ಮಾಡುವ ಮೂಲಕ ಎದುರಾಳಿ ಫ್ರಾನ್ಸ್ ತಂಡಕ್ಕೆ ಮೊದಲ ಗೋಲು ಸಿಗುವಂತೆ ಮಾಡಿದರು. ನಂತರ ಫ್ರಾನ್ಸ್ ನ ಆಂಟೊನಿ ಗ್ರೀಜ್‌ಮನ್ 38ನೇ ನಿಮಿಷದಲ್ಲಿ, ಪೌಲ್ ಪೊಗ್ಬ – 59ನೇ ನಿಮಿಷದಲ್ಲಿ ಹಾಗು ಕೈಲಿಯನ್ ಮಾಪೆ – 65ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೆಲುವಿಗೆ ಮಹತ್ವದ ಪಾತ್ರ ವಹಿಸಿದರು.
ಕ್ರೊಯೇಷಿಯಾ ಪರ ಇವಾನ್ ಪೆರಿಸಿಚ್ 28ನೇ ನಿಮಿಷದಲ್ಲಿ ಗೋಲು ಬಾರಿಸಿ ಖಾತೆ ತೆರದು ಪೈಪೋಟಿಯ ಸುಳಿವು ನೀಡಿದರಾದರೂ ನಂತರದ ಗೋಲು ಮಾರಿಯೊ ಮಂಡ್‌ಜುಕಿಚ್ ಅವರಿಂದ 69ನೇ ನಿಮಿಷದಲ್ಲಿ ಬಂತು. ಕೇವಲ ಎರಡು ಗೋಲುಗಳನ್ನು ಮಾತ್ರ ಗಳಿಸಿದ ಕ್ರೊಯೇಷಿಯಾ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
Related Articles
Thank you for your comment. It is awaiting moderation.
Comments (0)