- ಬೆಂಗಳೂರು
- ಮುಖ್ಯ ಮಾಹಿತಿ
- ರಾಜಕೀಯ
- ರಾಜ್ಯ
- Like this post: 0
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಎಐಸಿಸಿಗೆ ಕಿಕ್ ಬ್ಯಾಕ್: ಬಿಜೆಪಿ ಆರೋಪಕ್ಕೆ ಕೈ ಗರಂ,ಸದನ ನಾಳೆಗೆ ಮುಂದೂಡಿಕೆ!
- by Suddi Team
- July 11, 2018
- 162 Views
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಎಐಸಿಸಿಗೆ ಕಿಕ್ ಬ್ಯಾಕ್ ಕೊಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಕಲಾಪ ಬಲಿಯಾಯಿತು. ಚರ್ಚೆಗೆ ಬಿಜೆಪಿ ಪಟ್ಟು ಹಿಡಿದರೆ ಕಾಂಗ್ರೆಸ್ ನಿರಾಕರಿಸಿತು. ಇದ್ರಿಂದ ಸದನದಲ್ಲಿ ಕೋಲಾಹಲವೇ ಸೃಷ್ಠಿಯಾಗಿ ಸದನವವನ್ನು ನಾಳೆಗೆ ಮುಂದೂಡಬೇಕಾಯ್ತು.
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 150 ಕೋಟಿ ರೂ ಅವ್ಯವಹಾರ ನಡೆದಿದೆ.ಇದರಲ್ಲಿ ಎಐಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ರಾಮದಾಸ್ ಆರೋಪಿಸಿದರು.ಈ ಸಂಬಂಧ ಸಂಪೂರ್ಣ ದಾಖಲೆಗಳಿವೆ.ಸಿಡಿ ಸಹಿತ ಬಂದಿದ್ದೇನೆ ಎಂದರು.
ಇದಕ್ಕೆ ಆಪಕ್ಷೇಪ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ದಾಖಲೆಗಳಿಲ್ಲದೆ ಕಾಂಗ್ರೆಸ್ ವಿರುದ್ದ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ.ಬಿಜೆಪಿಯವರಿಗೆ ಹೇಗೆ ಕೇಶವಕೃಪಾನೋ ಹಾಗೆ ನಮಗೆ ಎಐಸಿಸಿ ದೇವಸ್ಥಾನ.ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ.ಆರೋಪ ಮಾಡೋದೇ ಆದರೆ ನೊಟೀಸ್ ಕೊಟ್ಟು ದಾಖಲೆ ಕೊಟ್ಟು ಆರೋಪ ಮಾಡಲಿ.ಯಾರೋ ಒಬ್ಬ ಲಂಚ ಹೊಡೆದು ಬಿಜೆಪಿ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದ್ರೆ ಒಪ್ಪುತ್ತೀರಾ ಎಂದ್ರು.
ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ.ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಮುಂದಾದ್ರು.ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು.ಯಾರಿಂದ ಲಂಚ ಪಡೆದ್ರು ಎಐಸಿಸಿಗೆ 50 ಕೋಟಿ ರೂ ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ.ದಾಖಲೆ ಕೊಡಲು ಸಿದ್ದ ಇರುವುದಾಗಿ ರಾಮದಾಸ್ ಪಟ್ಟು ಹಿಡಿದ್ರು.
ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಕೃಷ್ಣಬೈರೇಗೌಡ, ಎಐಸಿಸಿ ಎಂದರೆ ಒಂದು ಸಂಸ್ಥೆ.ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ.ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದ್ರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ.ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ.ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ.ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದ್ರು.
ಕೃಷ್ಣಬೈರೇಗೌಡ ಹೇಳಿಕೆಗೆ ಅರವಿಂದ ಲಿಂಬಾವಳಿ ಆಕ್ಷೇಪಿಸಿದ್ರು.ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ದ ಆರೋಪಿಸಿಲ್ಲ.ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ರಾಮದಾಸ್ ಪರ ವಕಾಲತ್ತು ವಹಿಸಿದ್ರು.
ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿಯವರಿಗೆ ಒಪ್ಪಿಸಿ,ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ರಾಮದಾಸ್ ಗೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸೂಚನೆ ನೀಡಿದ್ರು.ಆದರೆ ಅದನ್ನು ಒಪ್ಪದ ರಾಮದಾಸ್ ಮೊದಲು ಚರ್ಚೆ ಆಗಲಿ,ನ್ಯಾಯಾಂಗ ತನಿಖೆಗೆ ಆದೇಶಿಸಿ.ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದ್ರು.ಇದಕ್ಕೆ ಅಸಮಧಾನಗೊಂಡ ಉಪ ಸಭಾಧ್ಯಕ್ಷರು ದಾಖಲೆಕೊಡಿ ಭಾಷಣ ನಿಲ್ಲಿಸಿ ಎಂದು ಆದೇಶಿಸಿದದ್ರು.ಉಪಸಭಾಧ್ಯಕ್ಷರ ಆದೇಶ ವಿರೋಧಿಸಿ ಬಿಜೆಪಿ ಸದನದಲ್ಲಿ ಧರಣಿ ಆರಂಭಿಸಿತು.ಆಡಳಿತ ವಿರೋಧ ಪಕ್ಷ ಸದಸ್ಯರ ನಡುವೆ ವಾಗ್ವಾದ ನಡಯಿತು.ಪರ ವಿರೋಧ ಘೋಷಣೆಗಳು ಮೊಳಗಿ ಕೋಲಾಹಲ ಸೃಷ್ಠಿಯಾಯಿತು.ಸದನ ಸಹಜ ಸ್ಥಿತಿಗೆ ಮರಳದ ಕಾರಣ ವಿಧಾನಸಭೆ ಕಲಾಪವನ್ನಿ ನಾಳೆ 10:30ರವರಗೆ ಮುಂದೂಡಿಕೆ ಮಾಡಲಾಯಿತು.
Related Articles
Thank you for your comment. It is awaiting moderation.


Comments (0)