ಗೋವಾದ ಕಣಕೋಣ ಬೈಪಾಸ್: ಕರಾವಳಿಯ ನೈಸರ್ಗಿಕ ಸೌಂದರ್ಯ ಸವಿಯುವ ಅವಕಾಶ
- by Suddi Loka
- November 17, 2026
- 25 Views
ಪಣಜಿ: ದಕ್ಷಿಣ ಗೋವಾದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಿಸಲಾಗಿರುವ 7.74 ಕಿ.ಮೀ ಉದ್ದದ ಕಣಕೋಣ ಬೈಪಾಸ್ ಪ್ರಾದೇಶಿಕ ಸಂಪರ್ಕ ಸುಧಾರಿಸುವುದರ ಜೊತೆಗೆ ಪ್ರಯಾಣಿಕರಿಗೆ ಕೊಂಕಣ ಕರಾವಳಿಯ ನೈಸರ್ಗಿಕ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಿದೆ.
2019ರಿಂದ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಪಥದ ಈ ಬೈಪಾಸ್, ಚಾರ್ ರಾಸ್ತಾದಿಂದ ಮಾಶೆಮ್ವರೆಗೆ ಸಂಪರ್ಕ ಕಲ್ಪಿಸುತ್ತದೆ. ಗಲ್ಗಿಬಾಗ, ತಲ್ಪೋನಾ ಮತ್ತು ಮಾಶೆಮ್ ನದಿಗಳ ಮೇಲೆ ನಿರ್ಮಿಸಿರುವ ಮೂರು ಸೇತುವೆಗಳ ಮೂಲಕ ಸಾಗುವ ಮಾರ್ಗದಲ್ಲಿ ನದಿಗಳು, ಅರಣ್ಯ ಪ್ರದೇಶಗಳು ಮತ್ತು ಅರಬ್ಬಿ ಸಮುದ್ರದ ಸುಂದರ ದೃಶ್ಯಗಳನ್ನು ವೀಕ್ಷಿಸಬಹುದು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಪಡಿಸಿರುವ ಈ ಬೈಪಾಸ್ ಸ್ಥಳೀಯರು, ಪ್ರವಾಸಿಗರು ಹಾಗೂ ಸರಕು ಸಾಗಣೆಗೆ ಅನುಕೂಲ ಕಲ್ಪಿಸಿದೆ. ಸ್ಥಳೀಯ ಉದ್ಯಮಗಳು ಮತ್ತು ಜೀವನೋಪಾಯಕ್ಕೂ ನೆರವಾಗುತ್ತಿದೆ.
ಸುಮಾರು 1,600 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ-66 ಮಹಾರಾಷ್ಟ್ರದ ಪನ್ವೇಲ್ನಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಐದು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಕರಾವಳಿಯ ಪ್ರಮುಖ ಪಟ್ಟಣಗಳು, ಬಂದರುಗಳು, ವಾಣಿಜ್ಯ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಹೆದ್ದಾರಿ ಪ್ರಯಾಣಿಕರು ಹಾಗೂ ಸರಕು ಸಾಗಣೆಗೆ ಪ್ರಮುಖ ಮಾರ್ಗವಾಗಿದೆ.


Comments (0)