ಪುಣೆಯಲ್ಲಿ ಅಜಿತ್ ಪವಾರ್ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ
- by Suddi Loka
- November 17, 2026
- 10 Views
ಪುಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪುಣೆಯಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅವರ ಹೆಸರಿನಲ್ಲಿರುವ ಜಿಲ್ಲಾ ಪರಿಷತ್ತಿನ ಪ್ರವೇಶ ದ್ವಾರವನ್ನೂ ಉದ್ಘಾಟಿಸಿದರು.
ಸಹಕಾರಿ ವಲಯವನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದರ ಜತೆಗೆ ರೈತರು, ಪಶುಪಾಲಕರು ಹಾಗೂ ಹಾಲು ಉತ್ಪಾದಕರ ಏಳಿಗೆಗೆ ಅಜಿತ್ ಪವಾರ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಶ್ರಮಿಸುವುದಕ್ಕೆ ಅವರು ಜೀವನದುದ್ದಕ್ಕೂ ಬದ್ಧರಾಗಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಗೌರವ ಗ್ಯಾಲರಿಯನ್ನು ಅಮಿತ್ ಶಾ ಉದ್ಘಾಟಿಸಿದರು. ಅವರ ಕುರಿತ ‘ಕಾಫಿ ಟೇಬಲ್ ಬುಕ್’ ಅನ್ನೂ ಬಿಡುಗಡೆ ಮಾಡಿದರು.


Comments (0)