ಭಾರತ, ಈಜಿಪ್ಟ್ ಪ್ರಮುಖ ವಲಯಗಳಲ್ಲಿ ವ್ಯಾಪಾರ ಒಪ್ಪಂದ, ಹೂಡಿಕೆ ಹೆಚ್ಚಿನ ಅವಕಾಶ

ಕೈರೋ: ಭಾರತ ಮತ್ತು ಈಜಿಪ್ಟ್ ನಡುವಿನ ವ್ಯಾಪಾರ ಹಾಗೂ ಹೂಡಿಕೆ ಸಂಬಂಧವನ್ನು ಮುಂದಿನ ಐದು ವರ್ಷಗಳಲ್ಲಿ ಬಲಪಡಿಸುವ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈಜಿಪ್ಟ್‌ನ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಈಜಿಪ್ಟ್ ಸಾರಿಗೆ ಸಚಿವ ಕಾಮೆಲ್ ಅಲ್-ವಜೀರ್ ಅವರೊಂದಿಗೆ ರೈಲ್ವೆ, ಹೆದ್ದಾರಿ, ಬಂದರು ಮತ್ತು ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚಿಸಿದರು. ಕೈಗಾರಿಕಾ ಸಚಿವ ಖಾಲಿದ್ ಹಶಾಮ್ ಅಲಿ ಮಹರ್ ಅವರೊಂದಿಗೆ ಜಂಟಿ ಉತ್ಪಾದನೆ, ತಂತ್ರಜ್ಞಾನ ವಿನಿಮಯ ಮತ್ತು ಕೈಗಾರಿಕಾ ಸಂಬಂಧ ಬಲಪಡಿಸುವ ಕುರಿತು ಮಾತುಕತೆ ನಡೆಸಿದರು.

ಈಜಿಪ್ಟ್‌ನಲ್ಲಿ 700ಕ್ಕೂ ಹೆಚ್ಚು ನೋಂದಾಯಿತ ಭಾರತೀಯ ಕಂಪನಿಗಳಿದ್ದು, ಅವು ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ರಫ್ತಿಗೆ ಕೊಡುಗೆ ನೀಡುತ್ತಿವೆ ಎಂದು ಗೋಯಲ್ ತಿಳಿಸಿದರು. ಎಂಎಸ್‌ಎಂಇ ಕ್ಷೇತ್ರದಲ್ಲಿ ಜಂಟಿ ತರಬೇತಿ ಮತ್ತು ಸುಧಾರಿತ ಉತ್ಪಾದನಾ ತಂತ್ರಜ್ಞಾನ ಅಳವಡಿಕೆ ಬಗ್ಗೆಯೂ ಚರ್ಚಿಸಲಾಯಿತು.

ಉಭಯ ದೇಶಗಳ ವ್ಯಾಪಾರ ಒಪ್ಪಂದದ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದ್ದು, ಆದ್ಯತೆಯ ವ್ಯಾಪಾರ ಒಪ್ಪಂದ (PTA) ಅಥವಾ ಮುಕ್ತ ವ್ಯಾಪಾರ ಒಪ್ಪಂದ (FTA) ಸಾಧ್ಯತೆ ಪರಿಶೀಲಿಸಲಾಗುವುದು. ಉದ್ಯಮ ವೇದಿಕೆಯಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

Related Articles

Comments (0)