ಎರಡು ಬಸ್ಗಳ ಮುಖಾಮುಖಿ ಡಿಕ್ಕಿ: 5 ಮಂದಿ ಸಾವು, 16 ಜನರಿಗೆ ಗಾಯ
- by Suddi Loka
- November 15, 2026
- 12 Views
ತರ್ನ್ ತಾರಣ್: ಪಂಜಾಬ್ನ ತರ್ನ್ ತಾರಣ್ ಜಿಲ್ಲೆಯ ನೌಶೆಹ್ರಾ ಪನ್ನುವಾನ್ ಗ್ರಾಮದ ಬಳಿ ತರ್ನ್ ತಾರಣ್–ಬಠಿಂಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಯಾತ್ರಾರ್ಥಿಗಳ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಅಮೃತಸರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತರಲ್ಲಿ ದವಿಂದರ್ ಕೌರ್, ನರೀಂದರ್ ಸಿಂಗ್ ಮತ್ತು 22 ವರ್ಷದ ಸಹಜ್ಪ್ರೀತ್ ಸಿಂಗ್ ಗುರುತು ಪತ್ತೆಯಾಗಿದೆ. ಉಳಿದವರ ಗುರುತು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎರಡೂ ಬಸ್ಗಳಲ್ಲಿ ಸುಮಾರು 80 ಯಾತ್ರಾರ್ಥಿಗಳಿದ್ದರು. ಒಂದು ಬಸ್ನಲ್ಲಿ 40 ಮಹಿಳಾ ಭಕ್ತರು ಅಮೃತಸರದ ಶ್ರೀ ದರ್ಬಾರ್ ಸಾಹಿಬ್ಗೆ ತೆರಳುತ್ತಿದ್ದರೆ, ಮತ್ತೊಂದು ಬಸ್ ಗೋಲ್ಡನ್ ಟೆಂಪಲ್ ಯಾತ್ರೆ ಮುಗಿಸಿ ಬರ್ಗಾರಿಗೆ ಮರಳುತ್ತಿತ್ತು ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂತಾಪ ವ್ಯಕ್ತಪಡಿಸಿದ್ದಾರೆ.


Comments (0)