ಮೈಕ್ರೋಸಾಫ್ಟ್ ಯತಾಸ್ಥಿತಿ; ಜಾಗತಿಕ ಸರ್ವರ್ ವ್ಯತ್ಯಯಕ್ಕೆ ಕ್ಷಮೆ ಯಾಚಿಸಿದ ಸಂಸ್ಥೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೋಟ್ಯಂತರ ಗ್ರಾಹಕರಿಗೆ ತೊಂದರೆ ಉಂಟುಮಾಡಿದ ತಾಂತ್ರಿಕ ವ್ಯತ್ಯಯಕ್ಕೆ ಮೈಕ್ರೋಸಾಫ್ಟ್ ಕ್ಷಮೆಯಾಚಿಸಿದೆ. Outlook, Teams ಮತ್ತು Copilot ಸೇರಿದಂತೆ ಹಲವು ಸೇವೆಗಳು ಇದೀಗ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ.

ಗುರುವಾರ ರಾತ್ರಿ ಆರಂಭವಾದ ಸರ್ವರ್ ಸಮಸ್ಯೆಯಿಂದ ಶುಕ್ರವಾರ ಹಲವು ದೇಶಗಳಲ್ಲಿ ವ್ಯವಹಾರ, ವಿಮಾನಯಾನ ಮತ್ತು ಸರ್ಕಾರಿ ಕಾರ್ಯಾಚರಣೆಗಳಿಗೆ ಅಡಚಣೆ ಉಂಟಾಗಿತ್ತು.

ಹಿಂದಿನ ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯದ ವೇಳೆ ಉಂಟಾದ ತಾಂತ್ರಿಕ ದೋಷವೇ ವ್ಯತ್ಯಯಕ್ಕೆ ಕಾರಣ. ಇದರಲ್ಲಿ ಸೈಬರ್ ದಾಳಿ ಅಥವಾ ಎಐ ಏಜೆಂಟ್‌ಗಳ ಪಾತ್ರವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಮೂಲ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಹೆಚ್ಚಿದ ಬೇಡಿಕೆಯಿಂದಾಗಿ ಸೇವೆಗಳನ್ನು ಹಂತ ಹಂತವಾಗಿ ಮರುಸ್ಥಾಪಿಸಲಾಗುತ್ತಿದೆ. ಪ್ರತಿಯೊಂದು ಹಂತದಲ್ಲೂ ಸ್ಥಿರತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.

ಸಂಪೂರ್ಣ ಪರಿಶೀಲನೆಯ ಬಳಿಕ ತಾಂತ್ರಿಕ ವ್ಯತ್ಯಯದ ಕುರಿತು ವಿವರವಾದ ವರದಿ ಬಿಡುಗಡೆ ಮಾಡುವುದಾಗಿ ಮೈಕ್ರೋಸಾಫ್ಟ್ ಭರವಸೆ ನೀಡಿದೆ.

Related Articles

Comments (0)