- Uncategorized
- Like this post: 0
ಪ್ರಯಾಣಿಕರಿಗೆ ಸಿಹಿಸುದ್ದಿ: ನ.20ರಿಂದ ಬೆಂಗಳೂರು-ರಾಯದುರ್ಗ ನಡುವೆ ನೂತನ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭ
- by Suddi Team
- November 11, 2026
- 9 Views
ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಇದೇ ನವೆಂಬರ್ 20ರಿಂದ ಬೆಂಗಳೂರು ಮತ್ತು ರಾಯದುರ್ಗ ನಡುವೆ ನೂತನ ನಾನ್-ಎಸಿ ಸ್ಲೀಪರ್ (Non A.C Sleeper) ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ.
ಈ ನೂತನ ಬಸ್ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೊರಟು ತುಮಕೂರು, ಹಿರಿಯೂರು, ಚಳ್ಳಕೆರೆ, ಬಿ.ಜಿ. ಕೆರೆ ಹಾಗೂ ಮೊಳಕಾಲ್ಮೂರು ಮಾರ್ಗವಾಗಿ ರಾಯದುರ್ಗ ತಲುಪಲಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ವೇಳಾಪಟ್ಟಿ ವಿವರ:
ಬೆಂಗಳೂರು-ರಾಯದುರ್ಗ: ರಾತ್ರಿ 10:00ಕ್ಕೆ (22:00) ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು, ನಸುಕಿನ ಜಾವ 2:45ಕ್ಕೆ (02:45) ಚಳ್ಳಕೆರೆ, ಬೆಳಿಗ್ಗೆ 4:00ಕ್ಕೆ (04:00) ಮೊಳಕಾಲ್ಮೂರು ಹಾಗೂ ಬೆಳಿಗ್ಗೆ 4:30ಕ್ಕೆ (04:30) ರಾಯದುರ್ಗ ತಲುಪಲಿದೆ.
ರಾಯದುರ್ಗ-ಬೆಂಗಳೂರು: ರಾತ್ರಿ 11:00ಕ್ಕೆ (23:00) ರಾಯದುರ್ಗದಿಂದ ಹೊರಟು, ರಾತ್ರಿ 11:30ಕ್ಕೆ (23:30) ಮೊಳಕಾಲ್ಮೂರು, ಮಧ್ಯರಾತ್ರಿ 1:00ಕ್ಕೆ (01:00) ಚಳ್ಳಕೆರೆ ಹಾಗೂ ಬೆಳಿಗ್ಗೆ 5:30ಕ್ಕೆ (05:30) ಬೆಂಗಳೂರು ತಲುಪಲಿದೆ.
ಆನ್ಲೈನ್ ಟಿಕೆಟ್ ದರ ವಿವರ (ಬೆಂಗಳೂರಿನಿಂದ):
ಚಳ್ಳಕೆರೆ: ವಯಸ್ಕರಿಗೆ ₹500 | ಮಕ್ಕಳಿಗೆ ₹400
ಮೊಳಕಾಲ್ಮೂರು: ವಯಸ್ಕರಿಗೆ ₹600 | ಮಕ್ಕಳಿಗೆ ₹470
ರಾಯದುರ್ಗ: ವಯಸ್ಕರಿಗೆ ₹650 | ಮಕ್ಕಳಿಗೆ ₹500
Related Articles
Thank you for your comment. It is awaiting moderation.


Comments (0)