‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ
- by Suddi Loka
- November 8, 2026
- 12 Views
ಬೆಂಗಳೂರು: ಆದಿತ್ಯ ಶಶಿಕುಮಾರ್ ಮತ್ತು ಸಮೀಕ್ಷಾ ಅಭಿನಯದ ಕನ್ನಡ ಚಿತ್ರ ‘ರಾಶಿ’ಯ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ವಿಜಯ್ ಪಾಲೇಗಾರ್ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ.
ಧುವನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅಖಿಲೇಶ್ ಎಂ. ಚಿತ್ರ ನಿರ್ಮಿಸಿದ್ದಾರೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಹುಲಿ ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಭಿನಂದನ್ ದೇಶಪ್ರಿಯ ಸಂಭಾಷಣೆ ಬರೆದಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ನವೀನ್ ಸೂರ್ಯ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಹೇಶ್ ಸತನೂರು ಹಾಗೂ ಸೋಮು ಕೆಂಗೇರಿ ಕಲಾ ನಿರ್ದೇಶನ ಮಾಡಿದ್ದು, ಎಪಿಎಸ್ ಸ್ಟುಡಿಯೋಸ್ ದೃಶ್ಯ ಪರಿಣಾಮಗಳ ಜವಾಬ್ದಾರಿ ವಹಿಸಿದೆ. ಟ್ರೈಲರ್ನಲ್ಲಿ ಚಿತ್ರದ ಕಥೆಯ ಒಂದು ಝಲಕ್ ಅನಾವರಣಗೊಂಡಿದೆ.


Comments (0)