‘ಮರಗಧ ನಾಣ್ಯಂ 2’: ಪ್ರಮುಖ ಪಾತ್ರಗಳಲ್ಲಿ ಆದಿ, ನಿಕ್ಕಿ ಗಲ್ರಾನಿ, ಪ್ರಿಯಾ ಭವಾನಿ ಶಂಕರ್
- by Suddi Loka
- November 8, 2026
- 9 Views
ಚೆನ್ನೈ: 2017ರಲ್ಲಿ ಯಶಸ್ಸು ಕಂಡ ‘ಮರಗಧ ನಾಣ್ಯಂ’ ಚಿತ್ರದ ಸೀಕ್ವೆಲ್ ‘ಮರಗಧ ನಾಣ್ಯಂ 2’ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಎ.ಆರ್.ಕೆ. ಶರವಣ ನಿರ್ದೇಶನದ ಈ ಫ್ಯಾಂಟಸಿ ಕಾಮಿಡಿ ಸಾಹಸಮಯ ಚಿತ್ರದಲ್ಲಿ ಆದಿ, ನಿಕ್ಕಿ ಗಲ್ರಾನಿ ಮತ್ತು ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ.
ಚೇಸ್, ದರೋಡೆ, ರಹಸ್ಯ ಹಾಗೂ ಫ್ಯಾಂಟಸಿ ಅಂಶಗಳು ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಮೇ ತಿಂಗಳಲ್ಲಿ ಪೂರ್ಣಗೊಂಡಿದೆ.

ಸತ್ಯರಾಜ್, ಮುನೀಶ್ಕಾಂತ್ ಮತ್ತು ಆನಂದರಾಜ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸುಧನ್ ಸುಂದರಂ ಸೇರಿದಂತೆ ಹಲವು ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಧಿಬು ನಿನನ್ ಥಾಮಸ್ ಸಂಗೀತ, ಪಿ.ವಿ. ಶಂಕರ್ ಛಾಯಾಗ್ರಹಣ ಹಾಗೂ ತಿರುಮಲೈ ರಾಜನ್ ಆರ್ ಸಂಕಲನ ಚಿತ್ರಕ್ಕಿದೆ.


Comments (0)