‘ರಾಮಾಯಣ’ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿದರೆ ಕಾನೂನು ಕ್ರಮ

ಮುಂಬೈ: ‘ರಾಮಾಯಣ: ಭಾಗ 1’ ಚಿತ್ರದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿರ್ಮಾಪಕರು ಎಚ್ಚರಿಸಿದ್ದಾರೆ.

ನವೆಂಬರ್ 2 ಮತ್ತು 6ರಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶದಂತೆ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸುವುದು, ಅಪ್‌ಲೋಡ್ ಮಾಡುವುದು ಮತ್ತು ಹಂಚಿಕೊಳ್ಳುವುದಕ್ಕೆ ನಿರ್ಬಂಧವಿದೆ. ಉಲ್ಲಂಘಿಸಿದರೆ ಕ್ರಿಮಿನಲ್, ಸಿವಿಲ್ ಹಾಗೂ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಜೈಲು ಶಿಕ್ಷೆ ಮತ್ತು ದಂಡವೂ ವಿಧಿಸಬಹುದು ಎಂದು ಚಿತ್ರತಂಡ ಎಚ್ಚರಿಸಿದೆ. ಈಗಾಗಲೇ ಹಂಚಿರುವ ದೃಶ್ಯಗಳನ್ನು ಅಳಿಸುವಂತೆ ಚಿತ್ರತಂಡ ಸೂಚಿಸಿದೆ.

ನವೆಂಬರ್ 5ರಂದು ಬಿಡುಗಡೆಯಾದ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸಿದ್ದಾರೆ. ರವಿ ದುಬೆ, ಅರುಣ್ ಗೋವಿಲ್ ಮತ್ತು ವಿವೇಕ್ ಒಬೆರಾಯ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

Related Articles

Comments (0)