ಕಾರಹುಣ್ಣಿಮೆ ಆಚರಣೆ ವೇಳೆ ಶಾಸಕ ಜಾಧವ್ ಕಾಲ ಮೇಲೆ ಹರಿದ ಎತ್ತಿನ ಬಂಡಿ: ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಗೆ ರವಾನೆ
- by Suddi Team
- June 28, 2018
- 69 Views
ಕಲಬುರಗಿ:ಕಾರ ಹುಣ್ಣಿಮೆ ಆಚರಣೆ ವೇಳೆ ಕಾಲ ಮೇಲೆ ಎತ್ತಿನ ಬಂಡಿ ಹರಿದ ಪರಿಣಾಮ ಶಾಸಕ ಡಾ.ಉಮೇಶ್ ಜಾಧವ್ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ಆಚರಣೆಗಳಲ್ಲಿ ಒಂದಾದ ಕಾರಹುಣ್ಣಿಮೆ ಅಂಗವಾಗಿ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಸಲಾಯಿತು. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ ಉಮೇಶ್ ಜಾಧವ್ ಸ್ಪರ್ಧೆಗೆ ಚಾಲನೆ ನೀಡಿದರು. ಈ ವೇಳೆ ಏಕಾ ಏಕಿ ನುಗ್ಗಿದ ಎತ್ತಿನ ಬಂಡಿ ಶಾಸಕ ಉಮೇಶ್ ಜಾಧವ್ ಸೇರಿದಂತೆ ಹಲವರ ಕಾಲು ಮೇಲಿಂದ ಹರಿದು ಹೋಯಿತು. ಪರಿಣಾಮ ಶಾಸಕ ಡಾ ಉಮೇಶ್ ಜಾಧವ್ ಕಾಲಿಗೆ ಗಾಯವಾಗಿದ್ದು ಮತ್ತಿಬ್ರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಾಸಕ ಡಾ ಉಮೇಶ್ ಜಾಧವ್ ರನ್ನು ಹೈದರಾಬಾದ್ ಗೆ ಕಳುಹಿಸಲಾಯಿತು. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Thank you for your comment. It is awaiting moderation.
Comments (0)