ನವರಾತ್ರಿ ಸಂಭ್ರಮ: ಅವಧೂತ ವಿನಯ್ ಗುರೂಜಿಯಿಂದ ವಿಶೇಷ ದೇವಿ ಪೂಜೆ: ಉತ್ತರಹಳ್ಳಿ ಬಳಿಯ ಆಶ್ರಮದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ
- by Suddi Loka
- November 4, 2026
- 3 Views
ಬೆಂಗಳೂರು: ನವರಾತ್ರಿ ಮಹೋತ್ಸವದ ಅಂಗವಾಗಿ ಉತ್ತರಹಳ್ಳಿ ಸಮೀಪದ ಆಶ್ರಮದಲ್ಲಿ ಅವಧೂತ ವಿನಯ್ ಗುರೂಜಿ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಭಾವದಿಂದ ಪುಷ್ಪಾರ್ಚನೆ ನೆರವೇರಿಸಿದರು.
ಪವಿತ್ರ ನವರಾತ್ರಿ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಗುರೂಜಿ ಅವರು ನೆರವೇರಿಸಿದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ದೇವಿಯ ದರ್ಶನ ಪಡೆದ ಭಕ್ತರು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿ ಧನ್ಯತಾ ಭಾವ ವ್ಯಕ್ತಪಡಿಸಿದರು. ಆಶ್ರಮದ ಆವರಣದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ನವರಾತ್ರಿ ಆಚರಣೆಯ ಸಂಭ್ರಮಕ್ಕೆ ಸಾಕ್ಷಿಯಾದರು.


Comments (0)