ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಮರು ನೇಮಕ!
- by Suddi Team
 - June 28, 2018
 - 72 Views
 
ಫೋಟೋ ಕೃಪೆ:ಟ್ವಿಟ್ಟರ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರನ್ನು ಮರು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಹಾಲಿ ಕಮಿಷನರ್ ಮಹೇಶ್ವರ್ ರಾವ್ ರನ್ನು ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿರುವ ಸರ್ಕಾರ ಬಿಬಿಎಂಪಿ ಕಮಿಷನರ್ ಆಗಿ ಮಂಜುನಾಥ್ ಪ್ರಸಾದ್ ಮರು ನೇಮಕ ಮಾಡಿದೆ.
ಕಾಂಗ್ರೆಸ್ ಶಾಸಕರು,ಬಿಬಿಎಂಪಿ ಕಾರ್ಪೊರೇಟರ್ ಗಳ ಒತ್ತಡಕ್ಕೆ ಮಣಿದಿದ್ದ ಹಿಂದಿನ ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಪ್ರಸಾದ್ ರನ್ನು ದಿಡೀರ್ ಎತ್ತಂಗಡಿ ಮಾಡಿತ್ತು.ಅಲ್ಲದೆ ಯಾವುದೇ ಸ್ಥಳ ನಿಯೋಜನೆಗೊಳಿಸದೆ ಎತ್ತಂಗಡಿ ಮಾಡಿತ್ತು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)