ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ:ಸಂಪುಟದಿಂದ ಗ್ರೀನ್ ಸಿಗ್ನಲ್
- by Suddi Team
 - June 28, 2018
 - 299 Views
 
ಫೋಟೋ ಕೃಪೆ:ಟ್ವಿಟ್ಟರ್
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದ ಕರಡು ಪ್ರತಿಗೆ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.
ಸೋಮವಾದಿಂದ ನಡೆಯಲಿರುವ ಜಂಟಿ ಅಧಿವೇಶನಕ್ಕೆ ಮುನ್ನ ಕೆಲ ನಿರ್ಧಾರ ಕೈಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಚಿವ ಸಂಪುಟ ಸಭೆ ನಡೆಸಿದ್ರು.ಬಜೆಟ್ ಮಂಡನೆ,ಹೊಸ ಸರ್ಕಾರದ ಮೊದಲ ಅಧಿವೇಶನ ಎದುರಿಸುವುದು ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ರು.ಬಹು ಮುಖ್ಯವಾಗಿ ಸಾಲಮನ್ನಾ ಚರ್ಚೆಗೆ ಬಂದ್ರೂ ಯಾವ ನಿರ್ಧಾರವನ್ನೂ ಕೈಗೊಳ್ಳದೆ ಸಂಪುಟ ಸಭೆ ಮುಗಿಸಲಾಯ್ತು.
ಸಂಪುಟ ಕೈಗೊಂಡ ನಿರ್ಧಾರಗಳು:
- ಜುಲೈ 2 ರಂದು ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಲಿರುವ ಭಷಣದ ಕರಡು ಪ್ರತಿಗೆ ಒಪ್ಪಿಗೆ
 - ಹಣಕಾಸು ವರದಿ ಅನುಷ್ಠಾನಕ್ಕೆ ಒಪ್ಪಿರುವ ವರದಿ ಅನುಷ್ಠಾನ.
 - ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅವಧಿ ವಿಸ್ತರಣೆಗೆ 30 ರೊಳಗೆ ಕೇಂದ್ರದ ಉತ್ತರ ಬರದಿದ್ದರೆ ನೂತನ ಸಿಎಸ್ ನೇಮಕ
 - ಜಿಲ್ಲಾ ಪಂಚಾಯ್ತಿ ಪಿಡಬ್ಲ್ಯೂಡಿ ಅಭಿವೃದ್ದಿ ಕೆಲಸಗಳನ್ನ ರಾಜ್ಯ ಸರ್ಕಾರದಿಂದಲೇ ಅನುಷ್ಠಾನ.
 - ನಾಲ್ಕನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗೆ ಶೇ. 40 ರಷ್ಟು ಅನುಧಾನ ನೀಡಿ ಅನುಷ್ಠಾನಗೊಳಿಸುವ ಕುರಿತು ತೀರ್ಮಾನ.
 
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)