BREAKING: 35 ವರ್ಷಗಳ ಬಳಿಕ ಥಿಯೇಟರ್‌ಗೆ ಬರ್ತಿದೆಯಾ ‘ಶಾಂತಿ ಕ್ರಾಂತಿ’? ವದಂತಿಗಳ ಬೆನ್ನಲ್ಲೇ ಈಶ್ವರಿ ಪ್ರೊಡಕ್ಷನ್ಸ್‌ನಿಂದ ಬಿಗ್ ಟ್ವಿಸ್ಟ್!
- by Suddi Team
- August 13, 2026
- 11 Views
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಂತಹದೊಂದು ಸಾಹಸಕ್ಕೆ ಯಾರೂ ಕೈಹಾಕಿರಲಿಲ್ಲ, ಮುಂದೆಯೂ ಕೈಹಾಕಲು ಸಾಧ್ಯವಿಲ್ಲ! ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ರಕ್ತ ಮತ್ತು ಬೆವರಿನ ಕನಸಿನ ಕೂಸು ‘ಶಾಂತಿ ಕ್ರಾಂತಿ’ (Shanti Kranti) ಮರು ಬಿಡುಗಡೆಯಾಗಲಿದೆ ಎಂಬ ಒಂದೇ ಒಂದು ಸುದ್ದಿ ಇಡೀ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ಯಾನ್-ಇಂಡಿಯಾ ಎಂಬ ಪದವೇ ಇಲ್ಲದ ಕಾಲದಲ್ಲಿ ಭಾರತೀಯ ಚಿತ್ರರಂಗವೇ ಕಣ್ಣು ಅರಳಿಸಿ ನೋಡುವಂತೆ ಮಾಡಿದ್ದ ಈ ದೃಶ್ಯಕಾವ್ಯ ಮತ್ತೆ ಬೆಳ್ಳಿಪರದೆಗೆ ಬರುತ್ತದೆ ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿವೆ.
ಕಳೆದ ಕೆಲವು ದಿನಗಳಿಂದ ಇಂಟರ್ನೆಟ್‌ನಲ್ಲಿ “ಶಾಂತಿ ಕ್ರಾಂತಿ ರೀ-ರಿಲೀಸ್ ಮಾಡಿ” ಎಂಬ ಅಭಿಮಾನಿಗಳ ಅಭಿಯಾನ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು. ಈ ಬೆನ್ನಲ್ಲೇ ಸೃಷ್ಟಿಯಾಗಿರುವ ನೂರಾರು ವದಂತಿಗಳಿಗೆ ಬ್ರೇಕ್ ಹಾಕಲು ಸ್ವತಃ ಈಶ್ವರಿ ಪ್ರೊಡಕ್ಷನ್ಸ್‌ನ ಬಾಲಾಜಿ ವೀರಸ್ವಾಮಿ ಅವರು ವೀಡಿಯೋ ಒಂದನ್ನು ಪೋಸ್ಟ್ ಮಾಡಿ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ!
“ಟ್ವಿಟರ್, ಫೇಸ್‌ಬುಕ್‌ನಲ್ಲಿ ಬರ್ತಿರೋ ಸುದ್ದಿಗಳೆಲ್ಲಾ ನಿಜನಾ?” – ಇಲ್ಲಿದೆ ಅಸಲಿ ಸತ್ಯ!
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಬಾಲಾಜಿ ವೀರಸ್ವಾಮಿ ಅವರು ನೇರವಾಗಿಯೇ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. “ಶಾಂತಿ ಕ್ರಾಂತಿ ಚಿತ್ರದ ಮೇಲೆ ನೀವು ತೋರಿಸುತ್ತಿರುವ ಈ ಕ್ರೇಜ್ ಕಂಡು ನಮಗೆ ರೋಮಾಂಚನವಾಗಿದೆ. ಆದರೆ ಸದ್ಯಕ್ಕೆ ಸಿನಿಮಾ ರೀ-ರಿಲೀಸ್ ಡೇಟ್ ಫಿಕ್ಸ್ ಆಗಿದೆ ಎನ್ನುತ್ತಿರುವ ಸುದ್ದಿಗಳೆಲ್ಲಾ ಕೇವಲ ವದಂತಿಗಳು. ನಾವು ಯಾವುದೇ ನಿರ್ಧಾರ ತಗೊಂಡ್ರೂ ಮೊದಲು ನಿಮಗೇ (ಅಭಿಮಾನಿಗಳಿಗೆ) ಅಧಿಕೃತವಾಗಿ ಅನೌನ್ಸ್ ಮಾಡ್ತೀವಿ” ಎಂದು ಹೇಳುವ ಮೂಲಕ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.
ರೀ-ರಿಲೀಸ್ ಹಿಂದೆ ಅಡಗಿದೆ ಕೋಟಿ ಕೋಟಿ ರೂಪಾಯಿ ಮತ್ತು ಮಕ್ಕಳ ಸಾಹಸ!
ಸಿನಿಮಾ ಪಂಡಿತರ ಪ್ರಕಾರ ‘ಶಾಂತಿ ಕ್ರಾಂತಿ’ ಚಿತ್ರವನ್ನು ಇಂದಿನ ಟ್ರೆಂಡ್‌ಗೆ ತಕ್ಕಂತೆ 4K ಮತ್ತು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನಕ್ಕೆ ಬದಲಾಯಿಸುವುದು ಸಣ್ಣ ಮಾತಲ್ಲ.
ನೆಗೆಟಿವ್ ಪ್ರಿಂಟ್ ಸವಾಲು: 35 ವರ್ಷಗಳ ಹಳೆಯ ಮಾಸ್ಟರ್ ಪ್ರಿಂಟ್‌ಗಳನ್ನು ಡಿಜಿಟಲ್ ರೂಪಕ್ಕೆ ತರಲು ಕೋಟ್ಯಂತರ ರೂಪಾಯಿ ಬಜೆಟ್ ಹಾಗೂ ಅತ್ಯಾಧುನಿಕ ಲ್ಯಾಬ್‌ಗಳ ಅವಶ್ಯಕತೆಯಿದೆ.
ಮಕ್ಕಳ ಹೆಗಲಿಗೆ ಹೊಣೆ: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಇಡೀ ಸಿನಿಮಾದ ರೀ-ವರ್ಕ್ ಜವಾಬ್ದಾರಿಯನ್ನು ತಮ್ಮ ಮಕ್ಕಳಾದ ಮನೋರಂಜನ್ ಮತ್ತು ತ್ರಿವಿಕ್ರಮ್ ಹೆಗಲಿಗೆ ವಹಿಸಿದ್ದಾರೆ. ಚಿಕ್ಕಪ್ಪ ಬಾಲಾಜಿ ಜೊತೆ ಸೇರಿ ಈ ಇಬ್ಬರು ಯುವ ನಾಯಕರು ಸಿನಿಮಾ ಮರು ಬಿಡುಗಡೆಗೆ ಬ್ಯಾಕ್‌ಸ್ಟೇಜ್ ವರ್ಕ್ ಆರಂಭಿಸಿದ್ದಾರೆ ಎನ್ನಲಾಗುತ್ತಿದ್ದು, ಇದೇ ಅಭಿಮಾನಿಗಳಲ್ಲಿ ಹೈಪ್ ಡಬಲ್ ಮಾಡಿದೆ!
ಅಂದು ಸೋತರೂ ಇಂದು ಗೆದ್ದ ‘ಕ್ರೇಜಿ’ ಸಾಮ್ರಾಟ!
1991ರಲ್ಲಿ ಕನ್ನಡ, ತಮಿಳು (ರಜನಿಕಾಂತ್) ಹಾಗೂ ತೆಲುಗು (ನಾಗಾರ್ಜುನ್) ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಅಂದು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ವಿಷಯದಲ್ಲಿ ಹಿನ್ನಡೆ ಕಂಡಿರಬಹುದು. ಆದರೆ ಹಂಸಲೇಖ ಅವರ ಮ್ಯೂಸಿಕ್ ಮ್ಯಾಜಿಕ್ ಮತ್ತು ರವಿಚಂದ್ರನ್ ಅವರ ಹಾಲೀವುಡ್ ರೇಂಜ್ ಮೇಕಿಂಗ್ ಇಂದಿನ 2K ಕಿಡ್ಸ್‌ಗೆ ಸಖತ್ ಕಿಕ್ ಕೊಡ್ತಿದೆ. ಥಿಯೇಟರ್‌ನಲ್ಲಿ ಈ ಚಿತ್ರವನ್ನು ಒಮ್ಮೆಯಾದರೂ ಮರು ವೀಕ್ಷಿಸಬೇಕು ಎನ್ನುವ ಯುವ ಪೀಳಿಗೆಯ ಹಠಕ್ಕೆ ಈಶ್ವರಿ ಪ್ರೊಡಕ್ಷನ್ಸ್ ಶೀಘ್ರದಲ್ಲೇ ಬಿಗ್ ಅಪ್‌ಡೇಟ್ ಕೊಡುವ ಮುನ್ಸೂಚನೆ ಸಿಕ್ಕಿದೆ!
Related Articles
Thank you for your comment. It is awaiting moderation.


Comments (0)