ಜನರಿಗೆ ತೊಂದರೆ ಕೊಡುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜೈಲಿಗೆ: ರೇವಣ್ಣ ಎಚ್ಚರಿಕೆ
- by Suddi Team
- June 25, 2018
- 205 Views
ಹಾಸನ:ಆರ್ ಟಿ ಓ ಅಧಿಕಾರಿಗಳು ಜನರಿಗೆ ತೊಂದರೆ ನೀಡಿದರೆ ಜೈಲಿಗೆ ಕಳುಸುವೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಸಚಿವ ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅನಗತ್ಯವಾಗಿ ಜನರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ,ಒಂದು ವೇಳೆ ಜನರಿಗೆ ತೊಂದರೆ ಕೊಡುತ್ತಿದ್ದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸುತ್ತೇನೆ,ಈಗಾಗಲೇ ಅಂತಹ ಅಧಿಕಾರಿಗಳ ಮಾಹಿತಿ ಇದೆ ಎಂದು ಎಚ್ಚರಿಕೆ ನೀಡಿದರು.
ಬಡ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡಬೇಕು, ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
135 ಕೋಟಿ ರೂ ವೆಚ್ಚದಲ್ಲಿ ತಲಾ 600 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ಪಿಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಫ್ಯಾಮಿಲಿ ಬ್ಲಾಕ್ ನಿರ್ಮಿಸಲು ಚಿಂತನೆ ಇದೆ.ಹೆರಿಗೆ ಬಂದ ಮಹಿಳೆಯರ ಖಾಸಗಿ ಆಸ್ಪತ್ರೆಗೆ ಕಳಿಸದಂತೆ ತಾಕೀತು ಮಾಡಿದ್ದೇನೆ, ಸೂಪರ್ ಸ್ಪೆಷಾಲಿಟಿ ಅಥವಾ ಖಾಸಗಿ ಆಸ್ಪತ್ರೆಗೆ ರೋಗಿ ಕಳುಹಿಸಿದರೆ ಯಾವ ಕಾರಣಕ್ಕೆ ಎಂದು ನಮೂದಿಸಬೇಕು.ಬಜೆಟ್ ನಲ್ಲಿ ಎಷ್ಟು ಹಣ ಮೀಸಲಿಡುತ್ತಾರೆ ಎಂಬುದನ್ನು ಗಮನಿಸಿ ಪ್ರತ್ಯೇಕ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದರು.
Related Articles
Thank you for your comment. It is awaiting moderation.
Comments (0)